ಪೊಲೀಸ್‌ಪೇದೆ ಮಗನೊಂದಿಗೆ ನೇಣಿಗೆ ಕೊರಳೊಡ್ಡಿದ್ದು ಯಾಕೆ ಗೊತ್ತಾ? ಇದು ಮನಕಲಕುವ ಕತೆ!!

ಮಗನ ಕಾಯಿಲೆಯಿಂದ ಮನನೊಂದಿದ್ದ ಪೊಲೀಸ್ ಹೆಡ್ ಕಾನ್ಸಟೇಬಲ್ ಮಗನನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ad

ಮೈಸೂರು ಕೆಎಸ್ ಆರ್ ಪಿ ಯ ಹೆಡ್ ಕಾನ್ಸಟೇಬಲ್ ವಿಶ್ವನಾಥ್ (೪೨) ಹಾಗೂ ಸಂಚಿತ್(೮) ಮೃತ ದುರ್ದೈವಿಗಳು. ಮೂಲತ ಮೈಸೂರಿವರಾದ ವಿಶ್ವನಾಥ್ ತಮ್ಮ ೮ ವರ್ಷದ ಮಗನೊಂದಿಗೆ ಕಳೆದ ಶನಿವಾರ ಮನೆ ಬಿಟ್ಟಿದ್ದರು. ಈ ಕುರಿತು ವಿಶ್ವನಾಥ್ ಮನೆಯವ್ರು ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು. ನೇರವಾಗಿ ಬೆಂಗಳೂರಿಗೆ ಬಂದಿದ್ದ ವಿಶ್ವನಾಥ್ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತ್ ರಾಜ್ ಲಾಡ್ಜನಲ್ಲಿ ಉಳಿದುಕೊಂಡು ತಮ್ಮ ಮಗನನ್ನು ಕೊಂದು ತಾವೂ ನೇಣಿಗೆ ಶರಣಾಗಿದ್ದಾರೆ. ಮಗನ ಖಾಯಿಲೆಯೇ ಆತ್ಮಹತ್ಯೆಗೆ ಕಾರಣ.

ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ವಿಶ್ವನಾಥ್ ತಮ್ಮ ಮಗ ಸಂಚಿತ್ ಆರ್ಟಿಸಂ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ೮ ವರ್ಷವಾದ್ರು ಮಾತು ಬರುತ್ತಿರಲಿಲ್ಲ. ಇದ್ರಿಂದಾಗಿ ಮಗನಿಗೆ ಶಾಲೆಗೆ ಸೇರಿಸಲು ಆಗಿರಲಿಲ್ಲವಂತೆ. ಇದ್ರಿಂದ ಸಾಕಷ್ಟು ನೊಂದುಕೊಂಡಿದ್ದ ವಿಶ್ವನಾಥ್ ಈ ರೀತಿಯ ಕೃತ್ಯ ಎಸಗಿ ತಾನೂ ನೇಣಿಗೆ ಶರಣಾಗಿದ್ದಾನೆ. ಪ್ರತಿಷ್ಟಿತ ಕುಟುಂಬದ ಹಿನ್ನಲೆ, ಇನ್ನೂ ವಿಶ್ವನಾಥ್ ಪ್ರತಿಷ್ಟಿತ ಕುಟುಂಬದವರಾಗಿದ್ದು ಇವ್ರ ಮಾವ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ವಿಶ್ವನಾಥ್ ಪತ್ನಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಇದ್ದಾಗ್ಯೂ ವಿಶ್ವನಾಥ್ ಗೆ ಮಗನ ಖಾಯಿಲೆ ಬಹುವಾಗಿ ಕಾಡಿತ್ತು ಇದ್ರಿಂದಾಗಿ ವಿಶ್ವನಾಥ್ ಸಾಕಷ್ಟು ನೊಂದಿದ್ದು ಕೊನೆಗೂ ಸಾವಿನ ಮೂಲಕ ತಮ್ಮ ನೋವಿಗೆ ವಿದಾಯ ಹೇಳಿದ್ದಾರೆ.