ಮಂಗಳೂರಿನ ಅನ್ನಪೂರ್ಣ ಲಾಡ್ಜ್ ಮೇಲೆ ಪೋಲೀಸರ ದಾಳಿ! ದಾಳಿ ನಡೆಸಿದಾಗ ಸಿಕ್ಕಿತ್ತು ನೆಲಮಾಳಿಗೆ. ಅಲ್ಲಿ ಎನು ನಡೀತಿತ್ತು ಗೊತ್ತಾ?

ಮಂಗಳೂರಿನ ಅನ್ನಪೂರ್ಣ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೀತಿದೆ ಎಂಬ ಖಚಿತ ಮಾಹಿತಿಯಂತೆ ದಾಳಿ ಮಾಡಿದ ಡಿಸಿಪಿ, ಆರು ಹೆಣ್ಣು ಮಕ್ಕಳನ್ನ ರಕ್ಷಸಿ, ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಬೆಳ್ತಂಗಡಿ ನಿವಾಸಿ ಪವನ್(26) ಎಂದು ಗುರುತಿಸಲಾಗಿದೆ. ಈತ ಬಂಗಾಳಿ ಯುವತಿಯರನ್ನ ವೇಶ್ಯಾವಾಟಿಕೆ ದಂಧೆಗೆ ಬಳಸುವ ಕಸುಬನ್ನ ಒಂದು ವರ್ಷದಿಂದ ಈ ಲಾಡ್ಜ್ ನಲ್ಲಿ ಮಾಡ್ತಿದ್ದ.

ಅದ್ರಂತೆ ಮೈಸೂರಿನ ಒಡನಾಡಿ ಸಂಘ ಹಾಗೂ ಚೈಲ್ಡ್ ಲೈನ್ ಅವರ ಖಚಿತ ಮಾಹಿತಿಯಂತೆ ದಾಳಿ ಮಾಡಿದ ಡಿಸಿಪಿ, ಎಸಿಪಿ ಸಿಸಿಆರ್ಬಿ ಆರೋಪಿಯನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು ಈತ ಈ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆಗೆಂದೇ ಒಂದು ಭೂಗತ ರೂಂ ಒಂದನ್ನು ಸಿದ್ಧಪಡಿಸಿ ಪೊಲೀಸರು ರೈಡ್ ಮಾಡುವ ವೇಳೆ ತಪ್ಪಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದ. ಆದ್ರೆ ಇದರ ಹಿಂದಿನ ವ್ಯವಸ್ಥಿತ ಅಡ್ಡೆಯನ್ನ ಮೈಸೂರಿನ ಒಡನಾಡಿ ಸಂಘ ಮತ್ತು ಚೈಲ್ಡ್ ಲೈನ್ ಪತ್ತೆ ಹಚ್ಚಿ ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದಾರೆ.

ಅದ್ರಂತೆ ಪೊಲೀಸರು ದಾಳಿ ಮಾಡಿ ಆರೋಪಿ ಪವನ್ ನನ್ನು ಬಂಧಿಸಿದ್ದಾರೆ. ಜೊತೆಗೆ ಬಂಗಾಳಿ ಯುವತಿಯರನ್ನ ರಕ್ಷಿಸಿದ್ದಾರೆ. ಇನ್ನು ಯುವತಿಯರಿಂದ ಆರು ಮೊಬೈಲ್, ವಿದೇಶಿ ಕರೆನ್ಸಿ, ಹಾಗೆಯೇ ಐನೂರು ರೂಪಾಯಿಯ ಹಳೆ ನೋಟು ಸೇರಿದಂತೆ ಸಾವಿರಾರು ಹಣವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯ ವಿಚಾರಣೆ ನಡೀತಾ ಇದ್ದು, ಈ ದಂಧೆಯ ಹಿಂದೆ ಇರುವವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.