ಪೊಲೀಸರ ಮೇಲೆ ಕಳ್ಳರಿಂದ ಹಲ್ಲೆ! ಗಂಭೀರವಾಗಿ ಗಾಯಗೊಂಡ ASI..!!

ರಾಜಧಾನಿಯಲ್ಲಿ ಬೈಕ್ ​ಕಳ್ಳರು ಅಟ್ಟಹಾಸ ಮೆರೆದಿದ್ದು, ಬೈಕ್ ಕದಿಯುತ್ತಿದ್ದ ಮಾಹಿತಿ ಮೇಲೆ ಬಂಧನಕ್ಕೆ ತೆರಳಿದ್ದ ASI ಮೇಲೆಯೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ad

 

ಬೆಂಗಳೂರು-ಹೊಸೂರು ರಸ್ತೆಯ ಚಂದಾಪುರ ಬಳಿ ಅಪರಿಚಿತರು ಬೈಕ್ ಕದಿಯುತ್ತಿದ್ದ ಮಾಹಿತಿಯ ಆಧಾರದ ಮೇಲೆ ಸೂರ್ಯಸಿಟಿ ಪೊಲೀಸರು  ಕಳ್ಳರ ಬಂಧನಕ್ಕೆ ತೆರಳಿದ್ದರು. ಈ ವೇಳೆ  ಸೂರ್ಯಸಿಟಿ ಠಾಣೆಯ ASI ಶಿವಲಿಂಗ ನಾಯಕ್ ಮೇಲೆ ಬೈಕ್​ ಕಳ್ಳರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

 

ಕಳ್ಳರ ಹಲ್ಲೆಯಿಂದ ಗಾಯಗೊಂಡ ಎಎಸ್​​ಐಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಸೂರ್ಯಸಿಟಿ ಪೊಲೀಸರು  ಆರೋಪಿಗಳಿಗಾಗಿ  ಹುಡುಕಾಟ ನಡೆಸಿದ್ದಾರೆ.  ಇನ್ನು ಕಳ್ಳರ 2 ಬೈಕ್​ಗಳನ್ನ ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ  ಗ್ರಾಮಾಂತರ ಎಸ್​ಪಿ ರಾಮ್​ ನಿವಾಸ್ ಸಪೆಟ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.