ಕುರುಕ್ಷೇತ್ರದಲ್ಲಿ ಕುರುಡು ಕಾಂಚಾಣದ್ದೇ ಸದ್ದು- ೧೪ ಕೆಜಿ‌ ಚಿನ್ನ, ಕೋಟಿ-ಕೋಟಿ ಹಣ ವಶಪಡಿಸಿಕೊಂಡ ಆಯೋಗ

ದಿನೇ ದಿನೇ ರಂಗೇರುತ್ತಿದೆ ಚುನಾವಣ ಕಣ..!ಈ ಬಾರಿಯೂ ಕುಣಿಯುತ್ತಿದೆ ಕುರುಡು ಕಾಂಚಾಣ..!

ad

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 13 ದಿನ ಬಾಕಿ ಇದೆ. ಆದ್ರೆ ಅದಾಗಲೇ ಈ ಬಾರಿಯ ಚುನಾವಣೆ ಕಳೆದ ಎರಡು ಮಹಾ ಚುನಾವಣೆಗಳನ್ನ ಮೀರಿ ನಿಂತಿದೆ.. ಯೆಸ್ ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಣ ಮದ್ಯದ ಅಮಿಷಗಳು ಜೋರಾಗ ತೊಡಗಿವೆ. ಕಳೆದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳನ್ನು ಮೀರಿಸುವಷ್ಟು ಆಕ್ರಮ ಹಣ ಮದ್ಯ ಈ ಬಾರಿ ವಶಪಡಿಸಿಕೊಳ್ಳಲಾಗಿದೆ. ಹೌದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಈ ಡಿಟೇಲ್ಸ್ ಒಮ್ಮೆ ನೋಡಿದ್ರೆ ನೀವೇ ಬೆಚ್ಚಿ ಬೀಳ್ತೀರಾ..!

ಚುನಾವಣಾ ಆಯೋಗ ವಶಪಡಿಸಿಕೊಂಡಿರುವ ಹಣ, ಮದ್ಯದ ವಿವರ :

ಇದೂವರೆಗೂ ಪೊಲೀಸ್ ಇಲಾಖೆ ಆದಾಯ ತೆರಿಗೆ ಇಲಾಖೆ ಚುನಾವಣಾ ಆಕ್ರಮಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 50.25 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ. ಇದಲ್ಲದೆ ಪೊಲಿಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಜಂಟಿಯಾಗಿ 21.58 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ. ಅಲ್ಲದೆ 21 ಕೋಟಿ ಮೌಲ್ಯದ 14 ಕೆ ಜಿ ಚಿನ್ನ , 10 ಕೆ ಜಿ ಬೆಳ್ಳಿ ಹಾಗೂ ಸೀರೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ಕಾನೂನು ಸುವ್ಯವಸ್ಥೆಯ ಮೇಲೂ ಎಲೆಕ್ಷನ್ ಎಫೆಕ್ಟ್..!

ಹಣ ಮದ್ಯದ ಅಮಿಷ ಒಂದು ಕಡೆಯಾದ್ರೆ ಚುನಾವಣಾ ಅಖಾಡದಲ್ಲಿ ಅಪರಾಧ ಸಂಖ್ಯೆಗಳು ಹೆಚ್ಚಾಗ್ತಾ ಇವೆ..ಚುನಾವಣಾ ದಿನಾಂಕ ಪ್ರಕಟವಾದ ನಂತ್ರ ಸಾಲು ಸಾಲು ಪ್ರಕರಣಗಳು ದಾಖಲಾಗಿವೆ, ಕಾನೂನು ಸುವ್ಯವಸ್ಥೆ ಕದಡಿದ ಆರೋಪ, ಬಾರ್ ಪರವಾನಿಗೆ, ಕರ್ನಾಟಕ ಅಬಕಾರಿ ಕಾಯಿದೆ, ಗುಂಡಾ ಕಾಯ್ದೆ, ಜಾಮೀನು ರಹಿತ ವಾರೆಂಟ್ ಗಳು ಹೀಗೆ ವಿವಿಧ ಕಾಯ್ದೆಯಡಿಯಲ್ಲಿ ಬರೋಬ್ಬರಿ 7932 ಪ್ರಕರಣಗಳು ಈ ಬಾರಿ ದಾಖಲಾಗಿವೆ..ಸದ್ಯ ಎಲೆಕ್ಷನ್ ಕಮೀಷನ್ ನೀಡೀರೋ ಮಾಹಿತಿ ಇದು ಆದ್ರೆ ಚುನಾವಣೆಗೆ ಇನ್ನೂ 13 ದಿನಗಲೂ ಬಾಕಿ ಇದ್ದು ಇನ್ನೂ ಯಾವೆಲ್ಲಾ ಅವಾಂತರಗಳು ಸೃಷ್ಟಿಯಾಗ್ತಾವೆ ಅನ್ನೋದನ್ನ ಕಾದು ನೋಡಬೇಕಿದೆ.