ಕಾಮಿ ಪೂಜಾರಿಗೆ ಗ್ರಾಮಸ್ಥರು ಕೊಟ್ರು ಭಾರೀ ಮರ್ಯಾದೆ

ಕಷ್ಟ ಅಂತಾ ಬಂದಿದ್ದ ಮಹಿಳೆಯನ್ನೇ ತನ್ನ ಮೋಹದ ಬಲೆಗೆ ಬೀಳಿಸಿಕೊಂಡು ರಾಸಲೀಲೆ ನಡೆಸುತ್ತಿದ್ದ ಕಾಮಿ ಪೂಜಾರಿ ಗ್ರಾಮಸ್ಥರು ಕೈಗೆ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಳೆದ 15 ವರ್ಷಗಳಿಂದ ತನ್ನ ಮೈ ಮೇಲೆ ಸಿದ್ದಪ್ಪಾಜಿ ದೇವರು ಬರ್ತಾನೆ ಅಂತಾ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ ಗುಡ್ಡಪ್ಪ ಸಿಕ್ಕಿಬಿದ್ದ ವ್ಯಕ್ತಿ. ನಂಜನಗೂಡಿನ ಹದಿನಾರು ಗ್ರಾಮದಲ್ಲಿ ದೇವಸ್ಥಾನವನ್ನ ಕಟ್ಟಿಕೊಂಡು ಐಷಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿದ್ದ ಗುಡ್ಡಪ್ಪ ನೂರಾರು ಜನರಿಗೆ ಮಂಕುಬೂದಿ ಎರಚಿದ್ದಾನಂತೆ. ಗುಡಪ್ಪ ಮಹಿಳೆಯರಿಗೆ ಮೋಹದ ಬಲೆ ಬೀಸೋ ಮಾಹಿತಿ ತಿಳಿದ ಗ್ರಾಮಸ್ಥರು ಗುಡ್ಡಪ್ಪನನ್ನು ರೆಡ್​ ಹ್ಯಾಂಡ್​​ ಆಗಿ ಹಿಡಿದು ಅರೆಬೆತ್ತಲೆಯಲ್ಲೇ ಗ್ರಾಮದ ಚಾವಡಿಗೆ ಎಳೆದು ತಂದು ಮಾನ ಹರಾಜು ಹಾಕಿದ್ದಾರೆ. ಅಲ್ಲದೇ ಪೊಲೀಸರಿಗೂ ಒಪ್ಪಿಸಿ ಕಠಿಣ ಕ್ರಮ ಜರುಗಿಸಲು ಪಟ್ಟು ಹಿಡಿದಿದ್ದಾರೆ.