ಪ್ರಕಾಶ ರೈ ಬಾಯಿ ಬಚ್ಚಲಿದ್ದಂತೆ- ಹೀಗಂದ ಕನ್ನಡ ಹಿರಿಯ ನಟರ್ಯಾರು ಗೊತ್ತಾ?!

 

ಸದಾಕಾಲ ತಮ್ಮ ಮಾತಿನಿಂದಲೇ ವಿವಾದ ಸೃಷ್ಟಿಸುವ ನಟ ಪ್ರಕಾಶ್ ರೈ ವಿರುದ್ಧ ಹಿರಿಯ ನಟ ಹಾಗೂ ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಪ್ರಕಾಶ್ ರೈ ಸೇರಿದಂತೆ ಕನ್ನಡದ ವಿರುದ್ಧ ಮಾತನಾಡುವ ಎಲ್ಲರ ಬಾಯಿಯೂ ಬಚ್ಚಲಿದ್ದಂತೆ ಎಂದು ಟೀಕಿಸಿದ್ದಾರೆ.

ಕಾಲ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಚಂದ್ರು ಅವರು, ನಾಡು-ನುಡಿ ಪ್ರಶ್ನೆಬಂದಾಗ ನಾನು ನನ್ನ ಸ್ನೇಹಿತರಾಗಲಿ ಅಥವಾ ಅವರು ರಜನಿಕಾಂತ್,ಕಮಲ್ ಹಾಸನ್, ಪ್ರಕಾಶ್ ರೈ ಯೇ ಆಗಿರಲಿ ಅವರ ನಡೆಯನ್ನು ನಾನು ಧಿಕ್ಕರಿಸುತ್ತೇನೆ. ಕಾಲ ಸಿನೇಮಾ ಪ್ರದರ್ಶನ ಮಾಡದಂತೆ ವಿತರಕರು ಹಾಗೂ ಪ್ರದರ್ಶಕರಿಗೆ ಅರಿವು ಮೂಡಿಸುತ್ತೆವೆ. ಆದ್ರೂ ಚಿತ್ರ ಪ್ರದರ್ಶನ ಆದ್ರೆ ದಂಗೆ ಏಳ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಜೆಡಿಎಸ್ ಪಕ್ಷವನ್ನು ಪುಟಗೋಸಿಗೆ ಹೋಲಿಕೆ ಮಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ದ ಹಾಸ್ಯಭರಿತವಾಗಿ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಚಂದ್ರು, ಉತ್ತಮ ಸಂಸ್ಕೃತಿ ಹೊಂದಿದವರು ಎನ್ನುವ ಬಿಜೆಪಿಗರ ಬಾಯಲ್ಲಿ ಈ ರೀತಿ ಮಾತು ಬರಬಾರದು. ಅನಂತಕುಮಾರ್ ಹೆಗಡೆ ಪುಟಗೋಸಿಗೆ ಅವಮಾನ ಮಾಡಿದ್ದಾರೆ. ಪುಟಗೋಸಿ, ಲಂಗೋಟಿಗೆ ಅದರದ್ದೆ ಆದ ಮಹತ್ವ ಇದೆ. ಅನಂತಕುಮಾರ್ ಹೆಗಡೆ ಅದನ್ನು ಅರಿಯಬೇಕು. ಪುಟಗೋಸಿ ಬೇಕಣ್ಣ.. ಅಂಗಾಂಗ ಮುಚ್ಚೋಕೆ ಎಂಬ ದಾಸರ ಪದವನ್ನು ಉದಾಹರಿಸಿ ಸ್ವಾರಸ್ಯಕರವಾಗಿ ಮಾತನಾಡಿದ್ರು.