ಇಂಜೀನಿಯರ್​ ಪದವೀಧರ, ಮಲ್ಟಿನ್ಯಾಶನಲ್​ ಕಂಪನಿಯ ಉದ್ಯೋಗಿ ಈಗ ಉಡುಪಿ ಅಷ್ಠಮಠದ ಉತ್ತರಾಧಿಕಾರಿ!!

ಆತನ ಹೆತ್ತವರು ಇಂಜೀನಿಯರಿಂಗ್ ಪದವೀಧರ ಮಗನಿಗೆ ಮದುವೆ ಮಾಡುವ ಕನಸಿನಲ್ಲಿದ್ದರು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ಹೀಗಾಗಿ 27 ವರ್ಷದ ಇಂಜಿನಿಯರ್ ಪದವೀಧರ ಪ್ರಶಾಂತ್ ಆಚಾರ್ಯ ಅಷ್ಟಮಠದ ಉತ್ತರಾಧಿಕಾರಿಯಾಗಿ ಸೋಮವಾರ ಸನ್ಯಾಸ ಸ್ವೀಕರಿಸಿದ್ದಾರೆ.

ad

ಉಡುಪಿ ನಗರದ ಕುಂಜಿಬೆಟ್ಟು ನಿವಾಸಿಯಾಗಿದ್ದ 27 ವರ್ಷದ ಪ್ರಶಾಂತ್ ಆಚಾರ್ಯ, ಇಂಜಿನಿಯರಿಂಗ್ ಪದವೀಧರ ಮತ್ತು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ದಂಪತಿಗಳ ಪುತ್ರ.

ಇತ್ತೀಚೆಗಷ್ಟೆ ಮಗನಿಗೆ ಮದುವೆ ಮಾಡಿಸಲು ಹುಡುಗಿ ಹುಡುಕುತ್ತಿದ್ದರು. ಆದರೆ ಪ್ರಶಾಂತ ಜಾತಕ ಬಲದ ಆಧಾರದ ಮೇಲೆ ಪುತ್ತಿಗೆ ಶ್ರೀಗಳ ಆಶಯದ ಮೇರೆಗೆ, ಪುತ್ರನನ್ನು ಹೆತ್ತವರು ಶ್ರೀಮಠಕ್ಕೆ  ಒಪ್ಪಿಸಿದ್ದಾರೆ. ಏಪ್ರಿಲ್ 20ರ ಶನಿವಾರ ಸನ್ಯಾಸ ಸ್ವೀಕಾರದ ಪೂರ್ವಭಾವಿಯಾಗಿ ಆತ್ಮಶ್ರಾದ್ದ, ವಿರಾಜ ಹೋಮ ಸಹಿತ, ಹಲವು ಧಾರ್ಮಿಕ ಪ್ರಕ್ರಿಯೆಗಳು ನಡೆದಿದ್ದವು.

 

ನಂತರ ಸೋಮವಾರ ಬೆಳಗ್ಗೆ 11.40 – 11.45ರ ಶುಭಲಗ್ನದಲ್ಲಿ , ಪುತ್ತಿಗೆ ಮೂಲ ಮಠದಲ್ಲಿ ಯತಿಗಳಾದ ಸುಗುಣೇಂದ್ರತೀರ್ಥರು, ತಮ್ಮ ಉತ್ತರಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದ್ದಾರೆ. ಮೊದಲಿನಿಂದಲೂ ಆಧ್ಯಾತ್ಮಕದ ಕಡೆಗೆ ಒಲವು ಹೊಂದಿದ್ದ ಪ್ರಶಾಂತ್ ಆಚಾರ್ಯ, ಸಂಸ್ಕೃತದ ಪ್ರಾಥಮಿಕ ಜ್ಞಾನವನ್ನು ಹೊಂದಿದ್ದು, ಪುತ್ತಿಗೆ ಮಠದ ಯತಿಪರಂಪರೆಯ 31ನೇ ಯತಿ ಇವರಾಗಿದ್ದು, ನೂತನ ಶ್ರೀಗಳಿಗೆ “ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು” ಎಂದು ಪುತ್ತಿಗೆ ಹಿರಿಯ ಶ್ರೀಗಳು ನಾಮಕರಣ ಮಾಡಿದ್ದಾರೆ.