ಪ್ರಕಾಶ್ ರೈ ಮೇಲೆ ಪ್ರಥಮ್ ಗರಂ

ಪ್ರಕಾಶ ರೈ ವಿರುಧ್ಧ ಬಿಗ್ ಬಾಸ್ ಪ್ರಥಮ್ ಟೀಕೆ

ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಪರೇಶ್ ಮೇಸ್ತ್ ಎನ್ನುವವರನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಹತ್ಯೆಗೈದು ಕೆರೆಯಲ್ಲಿ ಎಸೆದಿದ್ದರು. ಈ ಸಂಬಂಧ ಬಿಗ್ ಬಾಸ್ ನ ವಿನ್ನರ್ ಪ್ರಥಮ್ ಪ್ರಕಾಶ್ ರೈ ರನ್ನ್ನು ಕೆಣಕಿದ್ದಾರೆ.

 

ಹೌದು ಪ್ರಕಾಶ್​ ರೈ ಮೇಲೆ ಒಳ್ಳೆ ಹುಡ್ಗ ಗರಂ ಆಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ರೈಗೆ ಬಿಗ್​ ಬಾಸ್ ವಿನ್ನರ್​ ಪ್ರಥಮ್ ಸವಾಲ್​ ಎಸೆದಿದ್ದಾನೆ. ಗೌರಿ ಲಂಕೇಶ್​ ಹತ್ಯೆ ಪ್ರಶ್ನಿಸಿ ದೇಶದಲ್ಲಿ ಏನಾಗಿದೆ ಎಂದಿದ್ದ  ಪ್ರಕಾಶ್​ ರೈ ಪರೇಶ್​ ಮೇಸ್ತಾ ಸಾವಿಗ್ಯಾಕೆ ಪ್ರಶ್ನಿಸುತ್ತಿಲ್ಲ. ನರಕ ಅಂದ್ರೆ ಏನು ಅನ್ನುವ ಹಾಗೇ ವಿಕೃತವಾಗಿ ಪರೇಶ್​ ಮೇಸ್ತಾರನ್ನು ಹತ್ಯೆ ಮಾಡಿದ್ದು, ಇದರ ಬಗ್ಗೆ ಯಾಕೆ ರೈ ಚಕಾರವೆತ್ತುತ್ತಿಲ್ಲ. ಇಲ್ಲಿ ಹಿಂದೂ ಮುಸ್ಲಿಂ ಅಂತಾ ಮಾತಾಡ್ತಿಲ್ಲ. ಮಾನವೀಯತೆ ಮನುಷ್ಯತ್ವದ ಬಗ್ಗೆ ಮಾತಾಡ್ತಿದ್ದೀನಿ. ಎಲ್ಲರ ಬಗ್ಗೆ ಒಂದೇ ಧೋರಣೆ ಇರಲಿ. ಏನ್ರಿ ದೊಡ್ಡ ನಟ ಎಂದು ಪ್ರಥಮ್​ ಪ್ರಕಾಶ್​ ರೈಗೆ ಪ್ರಶ್ನಿಸಿದ್ದಾರೆ.

 

 

ಈಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.