ಪ್ರತಾಪ ಸಿಂಹ ಪ್ರಕರಣ- ಪೊಲೀಸರ ವಿರುದ್ಧ ನ್ಯಾಯಾಲಯ ಅಸಮಾಧಾನ

ಮೈಸೂರು ಹನುಮಜಯಂತಿ ಗಲಾಟೆ ವೇಳೆ ಸಂಸದ ಪ್ರತಾಪ್​ ಸಿಂಹರಿಂದ ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಆಯ್​ಆರ್​ನಲ್ಲಿ ಸೆಕ್ಷನ್​188 ಬಳಸಿರೋದಕ್ಕೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದೆ.

adಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿರುವ ನ್ಯಾಯಾಲಯ, ನಿಯಮ ಉಲ್ಲಂಘನೆ ಮಾಡಿ ಎಫ್​ಐಆರ್​​ನಲ್ಲಿ ಸೆಕ್ಷನ್ 188 ಬಳಸಲಾಗಿದೆ. ಡಿಸಿ ವಿಧಿಸಿದ್ದ ನಿಷೇಧಾಜ್ಞೆ ಉಲ್ಲಂಘಿಸಿದರೆ ಮಾತ್ರ ಸೆಕ್ಷನ್​ 188 ಹಾಕಲು ಸಾಧ್ಯ. ಮೊದಲು 188 ಸೆಕ್ಷನ್ ಏಕೆ​ ಸೇರಿಸಿದ್ರಿ, ತಪ್ಪಾಗಿ ಸೇರಿಸಲು ಕಾರಣ ಏನು? ಇದೀಗ ಸೆಕ್ಷನ್​​​ ಕೈಬಿಡಲು ಹೇಗೆ ಸಾಧ್ಯ ಎಂದು ಜಡ್ಜ್​​ ಪ್ರಶ್ನಿಸಿದ್ದಾರೆ.

ಹುಣಸೂರಿನಲ್ಲಿ ನಿಷೇಧಾಜ್ಞೆ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಸದ ಪ್ರತಾಪ ಸಿಂಹರನ್ನು ಬಂಧಿಸಲಾಗಿತ್ತು. ಈ ವೇಳೆ ಪೊಲೀಸರ ನಡೆ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದ ಪ್ರತಾಪ ಸಿಂಹ ಎಸ್​​ಪಿ ರವಿ ಚೆನ್ನಣ್ಣನವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.