ಮದುವೆಗೂ ಮುನ್ನವೇ ಪ್ರಗ್ನೆಂಟ್​ ಆದ ಆ್ಯಮಿಗೆ ಕಾಡ್ತಿದೆಯಂತೆ ವಿಚಿತ್ರ ಬಯಕೆಗಳು!!

ಎಲ್ಲಾ ಬಸುರಿಯರಿಗೂ ಬಯಕೆಗಳು ಕಾಡುವುದು ಸಹಜ . ಪ್ರತಿಯೊಬ್ಬ ಬಸುರಿಯರಿಗೂ ತಾವು ಇಷ್ಟಪಡುವ ತಿಂಡಿಗಳನ್ನು ತಿನ್ನಬೇಕು , ಇಷ್ಟಪಡುವ ಸ್ಥಳವನ್ನು ನೋಡಬೇಕು, ಇಷ್ಟಪಡುವ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಆದರೆ ಸ್ಯಾಂಡಲ್ ವುಡ್ ನ ದಿ ವಿಲನ್ ಬೆಡಗಿ ಆ್ಯಮಿ ಜ್ಯಾಕ್ಸನ್​​ ಸದ್ಯ 6 ತಿಂಗಳ ಗಭೀರ್ಣಿಯಾಗಿದ್ದು, ಆ್ಯಮಿಗೊಂದು ವಿಚಿತ್ರ ಬಯಕೆ ಕಾಡುತ್ತಿದೆಯಂತೆ ಅದರಲ್ಲೂ ಆ ಬಸುರಿ ಬಯಕೆಯಲ್ಲಿ ಕನ್​​​​ಫ್ಯೂಷನ್ ಬೇರೆ ಇದೆಯಂತೆ, ಅದೇನಪ್ಪಾ ಅಂತೀರಾ ಹಾಗಾದರೆ ಈ ಸ್ಟೋರಿ ಓದಿ..

ad

6 ತಿಂಗಳ ಬಸುರಿಯಾಗಿರುವ ಆ್ಯಮಿಗೆ ಬೆಳಗ್ಗೆಯಾಗುತ್ತಿದ್ದಂತೆಯೇ ಎದ್ದು ಜಿಮ್​ಗೆ ಹೋಗುವುದಾ ಅಥವಾ ಒಂದು ಕಪ್​ ತುಂಬಾ ಜೇನುತುಪ್ಪಾ ತಿನ್ನೋದಾ ಎನ್ನುವುದೇ ಕನ್​​​​ಫ್ಯೂಷನ್​ ಬೇರೆ ಶುರುವಾಗುತ್ತಿದೆಯಂತೆ ಆದರೆ ಆ್ಯಮಿ ಮಾತ್ರ ಈ ಎರಡರ ನಡುವೇ ಫಿಟ್​​ನೆಸ್​​ಗೆ ಹೆಚ್ಚು ಇಂಪಾರ್ಟೆನ್ಸ್​ ಕೊಡ್ತಾರೆ, ಅದು ಹೇಗೆಂದರೆ ಜಿಮ್​ಗೆ ಹೋಗೋದಾ ಅಥವಾ ಒಂದು ಕಪ್​ ತುಂಬಾ ಜೇನುತುಪ್ಪಾ ತಿನ್ನುವುದಾ ಎಂಬುವುದರ ನಡುವಿನ ಹೋರಾಟದಲ್ಲಿ ಕೊನೆಗೂ ಗೆಲ್ಲುವುದು ಜಿಮ್​ ಅಂತ ಆ್ಯಮಿ ಹೇಳಿದ್ದಾರೆ.

ಇನ್ನೂ ಈ ವಿಚಾರವಾಗಿ ಇನ್ಸ್​​ಟಾಗ್ರಾಂ ಪೋಸ್ಟ್ ನಲ್ಲಿ ಪ್ರತಿ ದಿನ ಬೆಳಗ್ಗೆ ಜಿಮ್​ಗೆ ಹೋಗಬೇಕಾ ಅಥವಾ ಒಂದು ಕಪ್​ ಜೇನುತುಪ್ಪಾ ತಿನ್ನಬೇಕಾ ಅನ್ನೋ ಹೋರಾಟ ನಡೆಯುತ್ತದೆ. ಅದರಲ್ಲಿ ಬಹುತೇಕ ಸಲ ಗೆಲ್ಲೋದು ಜಿಮ್​ ಎಂದು ಬರೆದುಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ಸಹ ಪ್ರಶಂಶಿಸಿದ್ದಾರೆ. ಇನ್ನೂ ಫ್ಯಾನ್ಸ್ ಅಷ್ಟೇ ಅಲ್ಲದೆ ನಟಿ ಲೀಸಾ ಹೇಡನ್​ ಕೂಡ ತಮಗೂ ಹೀಗೇ ಆಗುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಲೀಸಾ ಇದೀಗಾ 2 ವರ್ಷದ ಝ್ಯಾಕ್​ ಎಂಬ ಮಗನಿಗೆ ತಾಯಿಯಾಗಿದ್ದಾರೆ.

View this post on Instagram

@cash_and_rocket what an adventure!! People thought I was crazy doing a road trip across Europe at 6 months pregnant but it was such an amazing experiences. As a mum to be, the @cash_and_rocket movement is something that’s very close to my heart and I wanted to do everything possible to help other mothers (and their babies) who are not as fortunate. I’ve met incredible women on this trip and made friendships that will last a lifetime – @zaramartin thankyou for being my lil ?, we’ve gone from saying Hi at work doo’s to spending a straight 72 hours together and I couldn’t have asked for a better ride or die copilot. @jbrangstrup thankyou for EVERYTHING you do, you’re a very special human. You inspire us everyday and if I’m even half as wonderful a mum as you, I’ll be happy! #WIESMANN YOU ROCKKK!! I’ve never driven such a stunning car – powerful but so safe! #TEAM37 smashed the last leg to Monte Carlo, I’m so sad I wasn’t there but family comes first ❤️ back to LONDON! And a HUGE THANKYOU to @jaymclaughlin for capturing us along the way ???

A post shared by Amy Jackson (@iamamyjackson) on

ಅಲ್ಲದೆ ಕಳೆದವಾರವಷ್ಟೇ ಚಾರಿಟಿಗಾಗಿ ಹಣ ಸಂಗ್ರಹಿಸಲು ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಯೂರೋಪ್​ ರೋಡ್​ ಟ್ರಿಪ್ ಮಾಡಿದ್ದಾರೆ. ಹೀಗೆ ಆ್ಯಮಿ ಜಾಕ್ಸನ್ ತನ್ನ ಚೊಚ್ಚಲ ತಾಯ್ತನವನ್ನು ಸಾಕಷ್ಟು ಎಕ್ಸೈಟಿಂಗ್ ಆಗಿ ಮಾಡಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ.