ಸ್ಯಾಂಡಲ್ ವುಡ್ ಕುರುಕ್ಷೇತ್ರದ ಬಳಿಕ ಬಾಲಿವುಡ್‌ನಲ್ಲಿ ಬರ್ತಿದೆ ಮಹಾಭಾರತ.!!

ಕೆಲ ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲೂ ಲವ್ – ಆ್ಯಕ್ಷನ್ ಸಿನಿಮಾಗಳದ್ದೇ ಕಾರುಬಾರಾಗಿತ್ತು..ಆದ್ರೆ ಇತ್ತೀಚಿನ ದಿನಗಳಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾಗಳ ದರ್ಬಾರು ಜೋರಾಗೇ ನಡೀತಿದೆ.. ಓಲ್ಡ್ ಈಸ್ ಗೋಲ್ಡ್ ಅನ್ನೋ ಮಾತು ಮತ್ತೆ ಪ್ರೂವ್ ಆಗ್ತಿದೆ.. ಸಿನಿಮಾಗಳ ಮೂಲಕ ಪರಾಣ, ಇತಿಹಾಸ ಮತ್ತೆ ತೆರೆಮೇಲೆ ಮರುಕಳಿಸ್ತಿದೆ.

ಇದೀಗ ಕೆಲ ನಿರ್ಮಾಪಕ-ನಿರ್ದೇಶಕರ ಕಣ್ಣು ಬಿದ್ದಿರೋದು ಮಹಾಭಾರತದ ಕಥೆ ಮೇಲೆ.. ಮಹಾಭಾರತದ ಕಥೆಯನ್ನ ಸಿನಿಮಾ ಮಾಡೋಕ್ಕೆ ಚಿತ್ರರಂಗದ ಘಟಾನುಘಟಿಗಳು ನಾ ಮುಂದು ತಾ ಮುಂದು ಅಂತಿದ್ದಾರೆ. ಇದೀಗ ಬಾಲಿವುಡ್​ನಲ್ಲಿ ತಯಾರಾಗಲಿರುವ ಮಹಾಭಾರತ ಸಿನಿಮಾದ ಸೀಕ್ರೆಟ್​ ರಿವೀಲಾಗಿದೆ. ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್ ಶೆಟ್ಟಿ ಮಹಾಭಾರತ ಸಿನಿಮಾ ನಿರ್ಮಾಣ ಮಾಡ್ತಾರೆ ಅನ್ನೋದು ಈ ಹಿಂದೆಯೇ ಸುದ್ದಿಯಾಗಿತ್ತು. ಸಾವಿರ ಕೋಟಿ ವೆಚ್ಚದಲ್ಲಿ, ದೇಶದ ಪ್ರಮುಖ ಭಾಷೆಗಳಾದ ಕನ್ನಡ ಹಿಂದಿ ತಮಿಳೂ ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಚಿತ್ರವನ್ನ ತಯಾರು ಮಾಡ್ತಾರೆ ಅಂತ ಹೇಳಲಾಗ್ತಿತ್ತು.

ಈ ಚಿತ್ರದಲ್ಲಿ ಭೀಮನೇ ಹೈಲೈಟ್. ಭೀಮನ ದೃಷ್ಟಿಕೋನದಿಂದ ಮಹಾಭಾರತದ ಕಥೆಯನ್ನ ಸಿನಿಮಾದಲ್ಲಿ ಹೇಳಲಾಗುತ್ತೆ. ಮಾಲಿವುಡ್ ನ ಸೂಪರ್ ಸ್ಟಾರ್ ಮೋಹನ್ ಲಾಲ್​​​ ಭೀಮನ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಕನ್ಫರ್ಮ್​ ಆಗಿದೆ. ಅಷ್ಟೇ ಅಲ್ಲಾ ಚಿತ್ರಕ್ಕೆ ಹಾಲಿವುಡ್ ಮತ್ತು ಬಾಲಿವುಡ್ ಸ್ಟಾರ್ ಗಳನ್ನು ಕರೆತರೋ ಪ್ಲಾನ್ ಮಾಡ್ತಿದ್ದಾರೆ ಅನ್ನುವ ಸುದ್ದಿ ಹಬ್ಬಿತ್ತು. ಆದ್ರೆ ಬಿ.ಆರ್‌. ಶೆಟ್ಟಿ ನಿರ್ಮಾಣದ ಮಹಾಭಾರತ ಸಿನಿಮಾದ ಸುದ್ದಿ ಇದ್ದಕ್ಕಿದ್ದಂತೆ ತಣ್ಣಗಾಗಿತ್ತು.

ಈಗ ಉದ್ಯಮಿ ಮುಖೇಶ್‌ ಅಂಬಾನಿ ಸಹ ನಿರ್ಮಾಣದಲ್ಲಿ “ಮಹಾಭಾರತ’ ಚಿತ್ರವೊಂದು ತಯಾರಾಗುವ ಮಾಹಿತಿ ಹೊರಬಿದ್ದಿದೆ. ಬಾಲಿವುಡ್ ನಟ ಅಮೀರ್ ಖಾನ್ ನಿರ್ಮಿಸಲು ಉದ್ದೇಶಿಸಿರುವ ‘ಮಹಾಭಾರತ’ ಚಿತ್ರಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದೂ ಕೂಡ 1,000 ಕೋಟಿ ರೂ. ಬಜೆಟ್‌ನ ಚಿತ್ರವೇ ಆಗಿರಲಿದ್ದು,

 

ಆಮೀರ್‌ ಖಾನ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆಂದು ಹೇಳಲಾಗಿದೆ. ವಿಶೇಷ ಅಂದ್ರೆ ಇದು ಸರಣಿ ರೂಪದಲ್ಲಿಬರಲಿದೆ. ಸುಮಾರು ಐದು ಭಾಗಗಳಲ್ಲಿ ಬೆಳ್ಳಿ ತೆರೆಯ ಮೇಲೆ ಪ್ರದರ್ಶನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿನಿ ಜಗತ್ತಿನ ಟ್ರಾಕರ್‌ ಆಗಿರುವ ರಮೇಶ್‌ ಬಾಲಾ, ತನ್ನ ಟ್ವಿಟರ್‌ ಖಾತೆಯ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಆಮೀರ್‌ ಈ ಚಿತ್ರದಲ್ಲಿ ಕೃಷ್ಣ ಅಥವಾ ಅರ್ಜುನನ ಪಾತ್ರ ನಿರ್ವಹಿಸಲಿದ್ದಾರೆ. ಸದ್ಯಕ್ಕೆ ಅವರು “ಥಗ್ಸ್‌ ಆಫ್ ಹಿಂದೂಸ್ಥಾನ್‌’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಆ ಚಿತ್ರದ ಚಿತ್ರೀಕರಣ ಮುಗಿದ ಅನಂತರ ಮಹಾಭಾರತದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

 

ಈಗ ಸಿನಿಮಾ ಚರ್ಚಾ ಹಂತದಲ್ಲಿದೆ. ಈ ಚಿತ್ರ ಹಾಲಿವುಡ್‌ನ‌ “ಲಾರ್ಡ್‌ ಆಫ್ ದ ರಿಂಗ್ಸ್‌’ ಅಥವಾ “ಗೇಮ್ಸ್‌ ಆಫ್ ಥ್ರೋನ್ಸ್‌’ ಚಿತ್ರಗಳ ಗುಣಮಟ್ಟಕ್ಕೆ ಸರಿಸಾಟಿಯಾಗಿ ತಯಾರಾಗಲಿದೆ ಎಂದು ಬಾಲಾ ತಿಳಿಸಿದ್ದಾರೆ. ಆದರೆ ಇದನ್ನು ಅಮೀರ್‌ ಅಥವಾ ಚಿತ್ರತಂಡದ ಯಾರೊಬ್ಬರೂ ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಇದು ನಿಜವಾದರೆ ಇಷ್ಟು ದೊಡ್ಡ ಮೊತ್ತದಲ್ಲಿ ಭಾರತೀಯ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಮಹಾಭಾರತ’ ಪಾತ್ರವಾಗಲಿದೆ. ಮುಕೇಶ್ ಹೂಡಿಕೆ ಮಾಡುವ ಸಾಧ್ಯತೆ ಇರುವುದರಿಂದ ಸದ್ಯದಲ್ಲೇ ಈ ಚಿತ್ರದ ಕೆಲಸಗಳು ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ತಾವು ಆರಂಭಿಸಿರುವ ಹೊಸ ಕಂಪೆನಿ ಮೂಲಕ ಮುಕೇಶ್‌ ಹಣ ಹೂಡಡಲಿದ್ದು, ಕಂಪೆನಿಯ ಮೊದಲ ಯೋಜನೆ ಈ ಸಿನಿಮಾವೇ ಆಗಲಿದೆ. ಭವಿಷ್ಯದಲ್ಲಿ ಈ ಕಂಪೆನಿ ಮೂಲಕ ಮತ್ತಷ್ಟು ಚಿತ್ರಕ್ಕೆ ಮುಕೇಶ್‌ ಬಂಡವಾಳ ಹೂಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here