ಸರಣಿ ಬಾಂಬ್​ ಬ್ಲ್ಯಾಸ್ಟ್​ಗೆ ನಡುಗಿದ ಶ್ರೀಲಂಕಾ! ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಮೈತ್ರಿಪಾಲಸಿರಿಸೇನಾ!!

ಸರಣಿ ಬಾಂಬ್ ಸ್ಪೋಟದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇಂದು ಮಧ್ಯ ರಾತ್ರಿಯಿಂದ‌ ತುರ್ತು ಪರಿಸ್ಥಿತಿ ಜಾರಿಗೆ ಬರಲಿದೆ ಎಂದು ಆ ದೇಶದ ಅಧ್ಯಕ್ಷ ಮೈತ್ರಿಪಾಲ‌ ಸಿರಿ ಸೇನಾ ಘೋಷಿಸಿದ್ದಾರೆ. ನಿನ್ನೆ ಘಟನೆ ನಡೆದ ನಂತರ ಕರ್ಪ್ಯೂ ಘೋಷಿಸಿದ್ದ ಶ್ರೀಲಂಕಾ ಸರ್ಕಾರ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿತ್ತು.

ad

ಆದರೆ ಶ್ರೀಲಂಕಾದಲ್ಲಿ ಇನ್ನೂ ಸ್ಪೋಟಗಳು ಸಂಭವಿಸುವ ಸಾಧ್ಯತೆ ಇದೆ ಈಗಾಗಲೆ ಕೆಲವು ಕಡೆ ಜೀವಂತ ಬಾಂಬ್ ಗಳು ಹಾಗೂ ಸ್ಪೋಟಕಗಳು ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ಮುಂದೆ ಸ್ಪೋಟ ಸಂಭವಿಸಿದ್ರೆ ಸಂಭವಿಸಬಹುದಾದ ಅನಾಹುತವನ್ನ ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುದೆ ಎಂದು ಶ್ರೀಲಂಕಾ ಅಧ್ಯಕ್ಷರ ಕಚೇರಿ ಮೂಲಗಳು ತಿಳಿಸಿವೆ…

ಹೆಚ್ಚಾಗುತ್ತಲೆ ಇದೆ ಸಾವಿನ ಸಂಖ್ಯೆ.. ಪತ್ತೆಯಾಗುತ್ತಲೆ ಇದೆ ಸ್ಪೋಟಕಗಳು

ಒಂದು ಕಡೆ ನಿನ್ನೆ ಎಂಟು ಕಡೆ ನಡೆದ ಸ್ಪೋಟದಿಂದಾಗಿ‌ ಸುಮಾರು ೨೯೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ ೫೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ಕಡೆ ರಾಜಧಾನಿ ಕೊಲಂಬೊ ದಲ್ಲಿ ಅಪಾರ ಪ್ರಮಾಣದ ಸ್ಪೋಟಕಗಳು ಪತ್ತೆಯಾಗುತ್ತಲೆ ಇವೆ. ಇಂದು ಸಹ ಕೊಲಂಬೊದ ಸಂತ ಅಂಥೋಣಿ ಸೆಬಾಸ್ಟಿಯನ್ನ ಚರ್ಚ್ ಬಳಿ ೮೭ ಕೆಜಿ ಸ್ಪೋಟಕಗಳು ಪತ್ತೆಯಾಗಿದ್ದು ದ್ವೀಪ ರಾಷ್ಟ್ರದ ಜನರನ್ನ ಮತ್ತಷ್ಟು ಆತಂಕಕ್ಕೆ ದೂಡಿವೆ.