ನಾಲ್ವರು ಶಿಕ್ಷಕರಿಗೆ ರಾಷ್ಟ್ರಪತಿ ಪುರಸ್ಕಾರ- ಟ್ವಿಟರ್​ನಲ್ಲಿ ಮೋದಿ ಶ್ಲಾಘನೆ

ಕಲ್ಲನ್ನು ಶಿಲೆಯಾಗಿ ಮಾಡೋದು ಗುರು. ಆಚಾರ್ಯ ದೇವೋಭವ ಅನ್ನೋ ಸಂಸ್ಕೃತಿ ನಮ್ಮದು. ಹೀಗಾಗಿಯೇ ಪ್ರತಿವರ್ಷ ಮಾಜಿ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನ ಶಿಕ್ಷಕರ ದಿನ ಆಚರಿಸಲಾಗುತ್ತೆ. ಈ ಸಂದರ್ಭದಲ್ಲಿ ಆದರ್ಶ ಶಿಕ್ಷಕರಿಗೆ ರಾಷ್ಟ್ರಪತಿ ಪ್ರಶಸ್ತಿ ನೀಡೋದು ವಾಡಿಕೆ.

ad

ಈ ಭಾರಿ ನಾಲ್ವರು ಕರ್ನಾಟಕದ ಶಿಕ್ಷಕರು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಿಕ್ಕಬಳ್ಳಾಪುರದ ಶಿವಕುಮಾರ್, ಬೆಂಗಳೂರಿನ ಮಂಜು ಬಾಲಸುಬ್ರಹ್ಮಣ್ಯಂ, ಶೈಲಾ ಆರ್.ಎನ್​.ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಶಿಕ್ಷಕ ಡಾ.ರಮೇಶಪ್ಪ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

 

ಇನ್ನು ಈ ಆದರ್ಶ ಶಿಕ್ಷಕರ ಸೇವೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಟ್ವಿಟರ್​ನಲ್ಲಿ ಈ ನಾಲ್ವರು ಶಿಕ್ಷಕರನ್ನು ಮೋದಿ ಹಾಡಿ ಹೊಗಳಿದ್ದಾರೆ.