ಬೆಂಗಳೂರು ದಕ್ಷಿಣದಿಂದ ಪ್ರಧಾನಿ ನರೇಂದ್ರ ಮೋದಿ ಲೋಕ ಕಣಕ್ಕೆ ..?

ಬೆಂಗಳೂರು ದಕ್ಷಿಣದಿಂದ ಪ್ರಧಾನಿ ನರೇಂದ್ರ ಮೋದಿ ಲೋಕ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬೆಂ. ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಸ್ಪರ್ಧೆಗಳಿಯುತ್ತಾರೆ ಅನ್ನೋದು ಬಹುತೇಕ ಖಚಿತವಾಗಿತ್ತು. ಆದರೆ ಮೋದಿ ಬೆಂ. ದಕ್ಷಿಣದಿಂದ ಕಣಕ್ಕಿಳಿದರೆ ಮೈತ್ರಿ ಸರ್ಕಾರದ ಮುಂದಿನ ನಡೆ ಏನು ಅನ್ನೋದು ನಿರ್ಧಾರವಾಗಬೇಕಿದೆ. ಒಂದು ವೇಳೆ ಪ್ರಧಾನಿ ಮೋದಿ ಕರ್ನಾಟಕದಿಂದ ಲೋಕ ಅಖಾಡಕ್ಕೆ ಇಳಿದರೆ ರಾಜಕೀಯ ತಿರುವುಗಳು ಬದಲಾಗುವ ಸಾಧ್ಯತೆಗಳಿವೆ.

ad

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಎಂಬ ಕುತುಹಲ ಯಲ್ಲರಲ್ಲು ಮನೆಮಾಡಿತ್ತು ಇದೀಗಾ ಕುತೂಹಲಕ್ಕೆ ಮತ್ತುಷ್ಟು ಪುಷ್ಠಿ ಕೊಡುವಂತೆ ಮೋದಿರವರ ಹೆಸರು ಬೆಂ.ದಕ್ಷಿಣದಲ್ಲಿ ಕೇಳಿ ಬರುತ್ತಿದೆ . ಬೆಂ.ದಕ್ಷಿಣ ಬಿಜೆಪಿಯ ಭದ್ರ ನೆಲೆಯಾಗಿದ್ದು. ಮೋದಿಯವರಿಗೆ ಪ್ರಬಲ ಪೈಪೋಟಿಯನ್ನು ಈ ಕ್ಷೇತ್ರದಲ್ಲಿ ನಿರೀಕ್ಷಿಸಲು ಸಾದ್ಯವಿಲ್ಲ ಎನ್ನಲಾಗ್ತಿದೆ.

ಕರ್ನಾಟದಲ್ಲಿ ಮೇ2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದರೂ ಅಧಿಕಾರ ಮಾತ್ರ ಬಿಜೆಪಿಗೆ ಸಿಗಲಿಲ್ಲ. ಈ ಕಾರಣಕ್ಕಾಗಿಯೇ ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಸೀಟ್​ಗಳನ್ನು ಗೆಲ್ಲಲು ಮೋದಿ – ಅಮಿತ್​ ಶಾ ಹೊಸ ತಂತ್ರ ಹೆಣೆದಿದ್ದಾರೆ ಎನ್ನಲಾಗ್ತಿದೆ

ಭಾರತದಲ್ಲಿ ಮೋದಿಯ ಹಲೆ ಜೋರಾಗಿದ್ದು ದಕ್ಷಿಣ ಭಾರತದ ಕರ್ನಾಟಕದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭ್ಯವಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲೂ ಬಿಜೆಪಿಯ ಪತಾಕೆಯನ್ನು ಹಾರಿಸಲು ಮೋದಿ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.