20 ಅತ್ಯಾಚಾರ ಆರೋಪಿ ಸೈಕೋ ಶಂಕರ್ ಆತ್ಮಹತ್ಯೆ !! ಜೈಲಿನಲ್ಲೇ ಉಸಿರು ನಿಲ್ಲಿಸಿದ ಸೀರಿಯಲ್ ಕಿಲ್ಲರ್ !!

ಜೈಲಿನಲ್ಲಿದ್ದ ಕೈದಿ ಸೈಕೊ ಶಂಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಲೇಡ್​ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರದ ಜೈಲಿನಲ್ಲೇ ಸೈಕೋ ಸೂಸೈಡ್​ ಮಾಡಿಕೊಂಡಿದ್ದು, ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸೈಕೋ ಶಂಕರ್ ಕಳೆದ 2 ವರ್ಷಗಳ ಹಿಂದೆ ಜೈಲಿನ ರಕ್ಷಣಾ ಗೋಡೆ ಹಾರಿ ಎಸ್ಕೇಪ್ ಆಗುವ ವೇಳೆ ನಡು ಮುರಿದುಕೊಂಡಿದ್ದ. ಮೂರು ದಿನಗಳ ನಂತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಸೈಕೋ ಶಂಕರ ಮತ್ತೆ ಜೈಲು ಸೇರಿದ್ದ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಂಕರನಿಗೆ ಪ್ರತ್ಯೇಕ ಸೆಲ್ ನೀಡಿಲಾಗಿತ್ತು. ನಿನ್ನೆ ಮಧ್ಯ ರಾತ್ರಿ ಬ್ಲೇಡ್​ನಿಂದ ಗಾಯಗೊಂಡ ನಂತ್ರ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಯ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸೈಕೋ ಶಂಕರ್ ಸಾವನ್ನಪ್ಪಿದ್ದಾನೆ. ಉಮೇಶ್​ ರೆಡ್ಡಿಯನ್ನೂ ಮೀರಿಸಿದ್ದ ಜಯ್​​ಶಂಕರ ಹಲವು ಮಹಿಳೆಯರ ನಿದ್ದೆಗೆಡಿಸಿದ್ದ ಅತ್ಯಾಚಾರಿಯಾಗಿದ್ದ. ತಮಿಳುನಾಡು ಮೂಲದ ಜಯ್​ ಶಂಕರ ಸರಣಿ ಹಂತಕ, ಸೈಕೋ ಕಿಲ್ಲರ್ ಪಟ್ಟ ಹೊತ್ತಿದ್ದ.

2013ರಲ್ಲಿ ಪರಪ್ಪನ ಅಗ್ರಹಾರದಿಂದ ಪರಾರಿಯಾಗಿದ್ದ ಜಯ್​ಶಂಕರ್, ತಮಿಳುನಾಡಿನಲ್ಲಿ 20ಕ್ಕೂ ಅಧಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. 2011ರ ಮೇ ತಿಂಗಳಿನಲ್ಲಿ ಜೈಶಂಕರ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಕೊಯಮತ್ತೂರಿನಲ್ಲಿ ಲಾರಿ ಚಾಲಕನಾಗಿದ್ದ ಜೈಶಂಕರ ಮಹಿಳೆಯರ ರೇಪ್​ ಮಾಡಿ ಕೊಲ್ಲುವುದನ್ನೇ ಕಾಯಕ ಮಾಡಿಕೊಂಡಿದ್ದ. ತಮಿಳುನಾಡಿನಲ್ಲಿ 11 ಮಹಿಳೆಯರು, ಕರ್ನಾಟಕದಲ್ಲಿ ನಾಲ್ವರು ಮಹಿಳೆಯರ ಕೊಲೆ ಮಾಡಿದ್ದ. ಅತ್ಯಾಚಾರಕ್ಕೂ ಮುನ್ನ ಮಹಿಳೆಯರನ್ನು ವಿಧವಿಧವಾಗಿ ಹಿಂಸೆ ಮಾಡುತ್ತಿದ್ದ. ಕಾನ್ಸ್ ಟೇಬಲ್ ಒಬ್ಬರ ಪತ್ನಿಯನ್ನೇ ಅತ್ಯಾಚಾರವೆಸಗಿದ್ದ ಜೈಶಂಕರ ಚಿತ್ರದುರ್ಗ,ಬಿಜಾಪುರಗಳಲ್ಲೂ ಇವನ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಅಪರಾಧ ಕೃತ್ಯ ನಡೆಸಿದ ಕೂಡಲೇ ಸ್ಥಳ ಬದಲಿಸುತ್ತಿದ್ದ ಜೈಶಂಕರನ ಸೆರೆಗೆ ಕರ್ನಾಟಕ ತಮಿಳುನಾಡು ಪೊಲೀಸರು ಹರಸಾಹಸ ನಡೆಸಿದ್ದರು.