ಮೊದಲ ಚಿತ್ರದ ಮೊದಲ ಹಾಡಿನಲ್ಲೇ ಮೋಡಿ ಮಾಡಿದ ಪ್ರಿಯಾ ವಾರಿಯರ್​!!

ಚಿತ್ರರಂಗಕ್ಕೆ ಕಾಲಿಡೋ ನಟ-ನಟಿಯರು ಮೊದಲ ಚಿತ್ರದಲ್ಲೇ ಮೋಡಿ ಮಾಡೋದು ಸಾಮಾನ್ಯ ಸಂಗತಿ. ಇದೀಗ ಈ ಸಾಲಿಗೆ ಒರು ಆದಾರ್ ಲವ್’ (Ooru adaar love) ಎಂಬ ಮಲೆಯಾಳಂ ಸಿನಿಮಾ ಸೇರ್ಪಡೆಯಾಗಿದೆ.

ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ದೇಶಾದ್ಯಂತ ಮನೆಮಾತಾಡಿದ್ದು, ಮೊದಲ ಚಿತ್ರದ ಮೊದಲ ಹಾಡಿನಲ್ಲೇ ಪ್ರಿಯಾ ವಾರಿಯರ್​​ ಯುವಜನತೆಯ ಎದೆಗೆ ಕಿಚ್ಚು ಹಚ್ಚಿದ್ದಾರೆ. ಟಿನೇಜ್​​​ನ ಮೃದು-ಮೃದು ಪ್ರೀತಿಯನ್ನು ಕಣ್ಣಲ್ಲೇ ವ್ಯಕ್ತಪಡಿಸುವ ದೃಶ್ಯವಿರುವ ಮಾಣಿಕ್ಯ ಪೂವಿ ಹಾಡಿನ ಭಾಗ ವೈರಲ್ ಆಗಿದೆ. ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಹೊಡೆದಿರುವ ಒಂದೇ ಒಂದು ದೃಶ್ಯ ಪಡ್ಡೆ ಹೈಕಳ್ ಮನ ಗೆದ್ದಿದೆ. ಈ ಹಾಡನ್ನು ಶಾನ್ ರೆಹಮಾನ್ ಸಂಯೋಜಿಸಿದ್ದು, ವಿನೀತ್ ಶ್ರೀನಿವಾಸನ್ ಹಾಡು ಹಾಡಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯ್ಯೂಟ್ಯೂಬ್​​ನಲ್ಲಿ ಈ ಹಾಡು ವೈರಲ್ ಆಗತೊಡಗಿದೆ.

ಫೇಸ್​ಬುಕ್​​ ಮತ್ತು ಯೂಟ್ಯೂಬ್​​ನಲ್ಲಿ ಈ ಹಾಡು ಸಾಕಷ್ಟು ಟ್ರೆಂಡ್ ಆಗಿದೆ. ಒಂದೇ ದಿನ 6 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಈವರೆಗೆ ಹತ್ತು ಲಕ್ಷ ಮಂದಿ ಫೇಸ್​ಬುಕ್​ನಲ್ಲಿ ಲೈಕ್​​​ ಮಾಡಿದ್ರೆ ಯೂಟೂಬ್​​ನಲ್ಲಿ 8 ಲಕ್ಷದ 40 ಸಾವಿರ ಮಂದಿ ಒಂದೇ ದಿನ ನೋಡಿದ್ದಾರೆ. ಅಮೆರಿಕದ ಮಾಡೆಲ್​​​ ಕಮ್​​ ನಟಿ ಕೈಲೆ ಜನ್ನರ್​​​,ಫುಟ್​ಬಾಲ್​​​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬಿಟ್ಟರೆ ಒಂದೇ ದಿನ ಒರು ಆದಾರ್​​ ಲವ್​ನ ಪ್ರಿಯಾ ವಾರಿಯರ್​​​ ಟ್ರೆಂಡ್ ಆಗಿದ್ದಾರೆ. ಇದೀಗ ಹೆಚ್ಚು ಮಂದಿ ಫಾಲೋ ಮಾಡಿದ ವಿಶ್ವದ ಮೂರನೇ ಸೆಲಬ್ರೆಟಿ ಅನ್ನೋ ಕೀರ್ತಿ ಪ್ರಿಯಾಗೆ ಸಿಕ್ಕಿದೆ. ಕೇರಳ ಮೂಲದ ತ್ರಿಶೂರ್​​ನ ಪ್ರಿಯಾ.