ಚುನಾವಣಾ ಪ್ರಚಾರದ ವೇಳೆ ಹಾವು ಹಿಡಿದ ಪ್ರಿಯಾಂಕಾ ವಾದ್ರಾ! ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಫುಲ್​ ವೈರಲ್​!!

ಉತ್ತರ ಪ್ರದೇಶದಲ್ಲಿ ಐದನೇ ಹಂತದ ಲೋಕಸಭಾ ಚುನಾವಣಾ ಪ್ರಚಾರ ಜೋರಾಗಿದ್ದು. ಮೇ 6ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳು ಮತದಾರರನ್ನ ಸೆಳೆಯೋ ಪ್ರಯತ್ನದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ರಾಯ್​​ಬರೇಲಿಯಲ್ಲಿ ಮತದಾರರೊಂದಿಗೆ  ಬಿರುಸಿನ ಪ್ರಚಾರ ನಡೆಸಿದ್ದು, ಪ್ರಚಾರದ ಮಧ್ಯೆ ಹಾವು ಹಿಡಿದು ಸುದ್ದಿಯಾಗಿದ್ದಾರೆ.

ರಾಯ್ ಬರೇಲಿಯಲ್ಲಿ ಪ್ರಿಯಾಂಕಾ  ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ಈ  ವೇಳೆ ರಸ್ತೆ ಬದಿಯಲ್ಲಿ ಹಾವಾಡಿಗನೊಬ್ಬ ಹಾವಾಡಿಸುತ್ತಿದ್ದನು. ಇದನ್ನು ನೋಡಿದ  ಪ್ರಿಯಾಂಕಾ ಗಾಂಧಿ ಹಾವಾಡಿಗನೊಂದಿಗೆ ಮಾತನಾಡಿ, ಆವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಹಾವು ಹಿಡಿದು ಅದನ್ನ ಬುಟ್ಟಿಯೊಳಗಿಡಲು ಸಹಾಯ ಮಾಡಿದ್ದಾರೆ. ಈ ದೃಶ್ಯ ಇದೀಗ ಎಲ್ಲೆಡೆ ವೈರಲ್​ ಆಗಿದೆ.

ಈ ಹಿಂದೆ ವಾರಣಾಸಿಯಲ್ಲಿ   ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ,  ಗಂಗಾನದಿಯ  ನೀರನ್ನು ಬೊಗಸೆಯಲ್ಲಿ ಹಿಡಿದು ಕುಡಿಯುವ ಮೂಲಕ ಸುದ್ದಿಯಾಗಿದ್ದರು. ಈಗ ಹಾವು ಹಿಡಿಯುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಹಾವು ಹಿಡಿದ ಪ್ರಿಯಾಂಕಾ ವಾದ್ರಾ

ಚುನಾವಣಾ ಪ್ರಚಾರದ ವೇಳೆ ಹಾವು ಹಿಡಿದ ಪ್ರಿಯಾಂಕಾ ವಾದ್ರಾ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 2, 2019