ಪ್ರಿಯಾಂಕಾ ಗಾಂಧಿ ಎದುರು ಚೌಕಿದಾರ್ ಚೋರ್ ಹೇ ಎಂದ ಮಕ್ಕಳು! ಇದಕ್ಕೆ ಪ್ರಿಯಾಂಕಾ ರಿಯಾಕ್ಷನ್​​ ಏನಾಗಿತ್ತು ಗೊತ್ತಾ?!

ಉತ್ತರ ಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ತಮ್ಮ ರಾಹುಲ್ ಗಾಂಧಿ ಪರ ಪ್ರಚಾರ ನಡೆಸುತ್ತಿರುವ ವೇಳೆ ಶಾಲಾ ಮಕ್ಕಳನ್ನು ಭೇಟಿಯಾಗಿದ್ದರು. ಈ ವೇಳೆ ಮಕ್ಕಳು ಕಾಂಗ್ರೆಸ್ ಪಕ್ಷವನ್ನು ಹೊಗಳಿ ಪ್ರಧಾನಿ ಮೋದಿಯನ್ನು ತೆಗಳಿದ್ದಾರೆ. ಇನ್ನೂ ಮಕ್ಕಳ ಬಾಯಿಂದ ಕೇಳಿ ಬಂದ ಮಾತುಗಳನ್ನು ಕೇಳಿ ಪ್ರಿಯಾಂಕ ಗಾಂಧಿ ಅಂತಹ ಮಾತುಗಳನ್ನು ಆಡಬಾರದು ಎಂದು ಕಿವಿಮಾತು  ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲಾತಾಣ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ad

ರಾಹುಲ್ ಗಾಂಧಿ ಪರವಾಗಿ ಎಲ್ಲೆಡೆ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಸದ್ಯ ಉತ್ತರ ಪ್ರದೇಶದ ಅಮೇಠಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಕೆಲ ಮಕ್ಕಳು  ಪ್ರಿಯಾಂಕಾ ಗಾಂಧಿ ಸ್ವಾಗತಿಸಲು ಬಂದಿದ್ದಾರೆ. ಹೀಗೆ ಬಂದ ಮಕ್ಕಳು  ಕಾಂಗ್ರೆಸ್ ನಾಯಕಿ ಪ್ರಿಯಾಂಕರನ್ನು ಘೋಷಣೆಯ ಮೂಲಕ ಸ್ವಾಗತಿಸಿದ್ದಾರೆ. ಆ ಘೋಷಣೆಯನ್ನು ಕೇಳಿ ಪ್ರಿಯಾಂಕ ಗಾಂಧಿ ಖುಷಿಯಾಗಿದ್ದಾರೆ.

ಆದರೆ ಅದೇ ಮಕ್ಕಳು ಇದ್ದಕ್ಕಿದ್ದ ಹಾಗೇ ಪ್ರಧಾನಿ ಮೋದಿ ವಿರುದ್ಧ ‘ಚೌಕೀದಾರ್ ಚೋರ್ ಹೇ’ ಎಂದು ಘೋಷಿಸಲು ಆರಂಭಿಸುತ್ತಾರೆ ಇದನ್ನು ಕೇಳಿದ ಪ್ರಿಯಾಂಕ ಅಚ್ಚರಿಗೊಂಡಿದ್ದು, ತಕ್ಷಣ ಮಕ್ಕಳನ್ನು ಹತ್ತಿರ ಕರೆದು ‘ಇದು ಒಳ್ಳೆಯ ಮಾತಲ್ಲ. ಇಂತಹ ಮಾತುಗಳನ್ನು ಆಡಬೇಡಿ. ಒಳ್ಳೆಯ ಮಕ್ಕಳಾಗಿ’ ಎಂದು ಕಿವಿಮಾತು ಹೇಳಿದ್ದಾರೆ. ನಂತರ ಕೇಳಿದ ಮಕ್ಕಳು ‘ರಾಹುಲ್ ಗಾಂಧಿ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ವೀಡಿಯೋವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್ ಮಾಡುತ್ತಾ ‘ದೇಶದ ಪ್ರಧಾನಿ ಎಷ್ಟೆಲ್ಲಾ ಸಹಿಸಬೇಕೆಂದು ನೀವೇ ಯೋಚಿಸಿ’ ಎಂದಿದ್ದಾರೆ. ಆದರೆ ಸ್ಮೃತಿ ಇರಾನಿ ಈ ವಿಡಿಯೋವನ್ನು ಎಡಿಟೆಡ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ.  ಏಕೆಂದರೆ ಈ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಮಕ್ಕಳನ್ನು ತಡೆಯುವ ಭಾಗವನ್ನು ತೆಗೆದು ಹಾಕಲಾಗಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿಯವರು ಮಕ್ಕಳನ್ನು ತಡೆಯುವ ದೃಶ್ಯಾವಳಿಗಳಿರುವ ಪೂರ್ಣ ವಿಡಿಯೋವನ್ನು ಶೇರ್ ಮಾಡಿ ಭೇಶ್ ಎಂಬ ಹೆಗ್ಗಳಿಕೆಯನ್ನು ನೀಡಿದ್ದಾರೆ.

 

ಇಷ್ಟಲ್ಲದೆ ಇತ್ತ ಆಮ್ ಆದ್ಮಿ ಪಕ್ಷದ ನಾಯಕ ಅಲಕಾ ಲಾಂಬಾ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ನನಗೆ ಆಕೆಯ ಪ್ರತಿಕ್ರಿಯೆ ಬಹಳ ಇಷ್ಟವಾಯಿತು. ಮಕ್ಕಳನ್ನು ಅವರು ಸರಿಯಾದ ಸಮಯಕ್ಕೆ ತಡೆದಿದ್ದಾರೆ ಎಂಬುವುದು ಒಳ್ಳೆಯ ವಿಚಾರ’ ಎಂದು ಹೊಗಳಿದ್ದಾರೆ.ಒಟ್ಟಿನಲ್ಲಿ ರಾಜಕೀಯದಲ್ಲಿ ರಾಜಕಾರಣಿಗಳ ಪ್ರತಿಯೊಂದು ನಡೆ-ನುಡಿಯೂ ದಾಖಲಾಗುತ್ತಿದ್ದು, ಪರಸ್ಪರ ಪರ ವಿರೋಧ ಚರ್ಚೆಗೆ ಅನುವು ಮಾಡಿಕೊಟ್ಟಿದೆ.

ಪ್ರಿಯಾಂಕಾ ಗಾಂಧಿ ಎದುರು ಚೌಕಿದಾರ್ ಚೋರ್ ಹೇ ಎಂದ ಮಕ್ಕಳು!

ಪ್ರಿಯಾಂಕಾ ಗಾಂಧಿ ಎದುರು ಚೌಕಿದಾರ್ ಚೋರ್ ಹೇ ಎಂದ ಮಕ್ಕಳು!

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 2, 2019