ದಾವಣಗೆರೆಯಲ್ಲೊಂದು ಗಲಾಟೆ ಮದುವೆ

 

ad


ಮೊದಲ ಪತ್ನಿಗೆ ವಿಚ್ಛೇಧನ ನೀಡದೇ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನೆ ಅಂತಾ ಮಹಿಳೆಯೊಬ್ಬರು ಮದುವೆ ತಡೆದು ಗಲಾಟೆ ಎಬ್ಬಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೌದು ಇಂದು ಬೆಳಗ್ಗೆ ನಗರದ ಹನುಮಂತಪ್ಪ ಛತ್ರದಲ್ಲಿ ಜಗದೀಶ್ ನಾಯ್ಕ್ ಎಂಬುವವರ ಮದುವೆ ನಡೆಯುತ್ತಿತ್ತು. ಆಗ ದಿಢೀರ್ ಎಂಟ್ರಿ ಕೊಟ್ಟ ಶ್ರೀದೇವಿ ಎಂಬ ಮಹಿಳೆ ಜಗದೀಶ್ ನನ್ನ ಪತಿ ಎರಡನೇ ಮದುವೆ ಆಗಲಿಕ್ಕೆ ಬಿಡೋದಿಲ್ಲ ಅಂತಾ ಗಲಾಟೆ ಎಬ್ಬಿಸಿದ್ದಾಳೆ.

ಮದುವೆಗೆ ಮಹಿಳೆ ಅಡ್ಡಿ ಪಡಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು. ಈ ವೇಳೆ ಶ್ರೀದೇವಿ ಜಗದೀಶ್​ ಮೇಲೆ ಹಾಕಿದ ಕೇಸ್​ಗಳು ವಜಾಗೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಆದರೇ ಶ್ರೀದೇವಿ ನಾನು ಜಗದೀಶ್​ ಅವರನ್ನು 7 ವರ್ಷಗಳಿಂದ ಪ್ರೀತಿಸಿದ್ದು, ಈಗ ಜಗದೀಶ್ ಮದುವೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ಆದರೇ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ ಜಗದೀಶ್​, ಆಕೆ ದುಡ್ಡಿಗೋಸ್ಕರ ನನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ. ಹಲವಾರು ವರ್ಷಗಳಿಂದ ಸುಳ್ಳು ಕೇಸ್​ ಹಾಕಿಸಿ ನನ್ನನ್ನು ಕಾಡುತ್ತಿದ್ದಾಳೆ ಎಂದು ಆರೋಪಿಸಿದ್ರು. ಅಲ್ಲದೇ ಈಗ ನಾನು ಅಕ್ಕನ ಮಗಳ ಜೊತೆ ಮದುವೆಯಾಗುತ್ತಿರುವುದನ್ನು ತಿಳಿದು ಹೀಗೆ ಗಲಾಟೆ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ.
ಒಟ್ಟಿನಲ್ಲಿ ಆರೋಪ ಪ್ರತ್ಯಾರೋಪದಲ್ಲೇ ಮದುವೆ ಮನೆ ಗೊಂದಲದ ಗೂಡಾಗಿತ್ತು. ಕೊನೆಗೆ ಸ್ಥಳದಲ್ಲೇ ಇದ್ದ ಪೊಲೀಸರು ಶ್ರೀದೇವಿಯ ಮನವೊಲಿಸಿದ್ದಾರೆ ಅಲ್ಲದೇ ದೀಪಾ ಜೊತೆ ಜಗದೀಶ್​ ಮದುವೆಯಾಗುವಂತೆ ನೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮದುವೆ ಗಲಾಟೆ ಮದುವೆಯಾಗಿದ್ದು ಮಾತ್ರ ಸತ್ಯ.