ದಿನೇಶ್​ ಗುಂಡೂರಾವ್​ ಮೌಲ್ವಿ ಬಗ್ಗೆ ಮಾತಾಡಿದ್ದರೇ- ಅವರ ಹೆಂಡತಿಯೇ ಬುದ್ದಿ ಕಲಿಸುತ್ತಿದ್ದರು- ಪ್ರತಾಪಸಿಂಹ ಆಕ್ರೋಶ!

ಚುನಾವಣೆ ಎದುರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿವಾದಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದರೆ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರೋ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ad


ನಿನ್ನೆ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬಿಜೆಪಿ ನಾಯಕರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್​ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಪ್ರತಿಕ್ರಿಯಿಸಿರೋ ಸಂಸದ ಪ್ರತಾಪ್ ಸಿಂಹ, ಈ ಮಾತನ್ನು ಯೋಗಿ ಆದಿತ್ಯನಾಥ ಬದಲು ಮುಲ್ಲಾನೋ-ಮೌಲ್ವಿ ಬಗ್ಗೆನೋ ಆಡಿದ್ರೆ ನಿಮ್ಮ ಹೆಂಡತಿ ತಬು ಅವರೇ ನಿಮಗೆ ನೀವು ಹೇಳಿದಂತೆ ಹೊಡೆಯುತ್ತಿದ್ದರು ಎಂದಿದ್ದಾರೆ. ಅಲ್ಲದೇ ನಿಮ್ಮ ನಾಲಿಗೆ ಮೇಲೆ ನಿಗಾ ಇರಲಿ ಎಂದು ಗುಡುಗಿದ್ದಾರೆ.

ಇನ್ನು ಈ ಹೇಳಿಕೆ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ನಿನ್ನೆ ಯೋಗಿ ಆದಿಥ್ಯನಾಥರಿಗೆ ಚಪ್ಪಲಿಯಿಂದ ಹೊಡೆಯಿರಿ ಅಂತಾ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಇದರಿಂದ ನಮಗೆಲ್ಲ ನೋವಾಗಿದೆ, ಆಘಾತವಾಗಿದೆ.ಯುಪಿ ಚುನಾವಣೆ ಸಂದರ್ಭದಲ್ಲಿ ಮಣಿಶಂಕರ್ ಅಯ್ಯರ್ ಪ್ರಧಾನಿಗೆ ನೀಚ ಎಂದಿದ್ದರು.ಆದ್ರಿಂದ ಅವ್ರನ್ನ ಕಾಂಗ್ರೆಸ್ ಉಚ್ಚಾಟಿಸಿತ್ತು.

ಈಗಲೂ ಕೂಡ ದಿನೇಶ್ ಗುಂಡೂರಾವ್ ಅವ್ರನ್ನ ಕಾಂಗ್ರೆಸ್ ಪಕ್ಷ ಉಚ್ಚಾಟಿಸಬೇಕುದಿನೇಶ್ ಗುಂಡೂರಾವ್ ಅವ್ರನ್ನ ಉಚ್ಛಾಟನೆ ಮಾಡದಿದ್ದಲ್ಲಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ.

ಯೋಗಿ ಆದಿತ್ಯನಾಥರ ಹಾಗೂ ಕನ್ನಡಿಗರು ಕ್ಷೆಮೆಯನ್ನ ದಿನೇಶ್ ಗುಂಡೂರಾವ್ ಕೇಳಬೇಕು.ರಾಜ್ಯ ಬಜೆಪಿ ವಕ್ತಾರ ಅಶ್ವತ್ಥನಾರಾಯಣ ಹೇಳಿಕೆ.ನಾಳೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಚುನಾವಣೆ ಆಯೋಗಕ್ಕೆ ದೂರು ಕೊಡ್ತೇವೆ ಎಂದರು.