ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಜನ್ರು ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿಯೂ ಇಂಥಹದೇ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗ ಜಿಲ್ಲಾಡಳಿತ ಮಾತ್ರ ಬಹುರಾಷ್ಟ್ರೀಯ ಕಂಪನಿಗೆ ನೀರು ಸರಬರಾಜು ಮಾಡಿ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿ ನಿತ್ಯ ಜಲಮಂಡಳಿ ಅಧಿಕಾರಿಗಳು ಇಲ್ಲಿಯ ಪೆಪ್ಸಿ ಕಂಪನಿಗೆ ಅಕ್ರಮವಾಗಿ ನೀರು ಹರಿಸುತ್ತಿದೆ. ತಿಂಗಳಿಗೆ 2 ವರೆ ಲಕ್ಷ ಲೀಟರ್​ ನೀರು ಹರಿಸುವ ಬದಲು 4 ಲಕ್ಷ ಲೀಟರ್​ ನೀರು ಹರಿಸುತ್ತಿದೆ. ಈ ಅಕ್ರಮದಲ್ಲಿ ಜಿಲ್ಲಾಡಳಿತ ಭಾಗಿಯಾಗಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಹೀಗಾಗಿ ನಿನ್ನೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟಗಾರರು ಪೆಪ್ಸಿ ಕಂಪನಿ ಹಟಾವೋ ಮಹದಾಯಿ ಬಚಾವೋ ಹೋರಾಟ ನಡೆಸಿದ್ರು. ಇನ್ನು ಈ ಅಕ್ರಕದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ದಾಖಲೆಗಳ ಮೂಲಕ ಸಾಬೀತು ಮಾಡಿದ್ದಾರೆ. ಅಲ್ಲದೇ ಮಹದಾಯಿ ಯೋಜನೆ ಜಾರಿಗೆ ಆಗಲು ಇದೇ ಪ್ರಕರಣ ತೊಡಕಾಗಿದೆ ಅಂತ ಕೂಡ ಆರೋಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here