ಪುನೀತ್ ರಾಜ್ ಕುಮಾರ್ ಜೊತೆಗೆ ಅವಳ್ಯಾರು ? ಗಾಂಧಿನಗರದ ದೊಡ್ಡ ಪ್ರಶ್ನೆಯಾದ ಅಪ್ಪುವೆಂಬ ಅಧಿಪತಿಯ ಕತೆ !!

Puneet Rajkumar acts a new movie in production of Rockline Venkatesh
Puneet Rajkumar acts a new movie in production of Rockline Venkatesh

ಒಂದು ಸಿನಿಮಾದ ವರ್ಕ್​ ಮುಗಿಯುತ್ತಿದ್ದಂತೆ ಮತ್ತೊಂದು ಚಿತ್ರದ ಶೂಟಿಂಗ್​​​ನಲ್ಲಿ ಭಾಗವಹಿಸೋದು ಪುನೀತ್​​​ ರಾಜ್​​​ಕುಮಾರ್​​​ ಪಾಲಿಸಿಕೊಂಡು ಬಂದಿರೋ ಸಂಪ್ರದಾಯ.

ad


ಆದ್ರೆ ವಿಶೇಷ ಅಂದ್ರೆ ಅಂಜನಿಪುತ್ರ ಸಿನಿಮಾ ಶೂಟಿಂಗ್​​ ಮುಗಿಸಿ ತೆರೆಕಂಡು 3 ತಿಂಗಳಾಗ್ತಾ ಬಂದ್ರು ಕೂಡ ಪವರ್​ಸ್ಟಾರ್​ ನಟನೆಯ ಯಾವ ಸಿನಿಮಾವೂ ಟೇಕಾಫ್​ ಆಗಿರ್ಲಿಲ್ಲ. ಅಂಜನಿಪುತ್ರ ಸಿನಿಮಾದ ಬಳಿಕ ಅಪ್ಪು ಯಾವುದೇ ಸಿನಿಮಾದ ಶೂಟಿಂಗ್​​ನಲ್ಲಿ ಭಾಗವಹಿಸಿರ್ಲಿಲ್ಲ. ಒಂದು ಲಾಂಗ್​ ಲೀವ್​​ನಲ್ಲಿನಲ್ಲಿದ್ರು. ದೊಡ್ಮನೆ ಹುಡ್ಗ, ರಾಜಕುಮಾರ, ಅಂಜನಿಪುತ್ರ ಅಂತ ಅಪ್ಪು ಇತ್ತೀಚೆಗೆ ಸಿನಿಮಾ ಶೂಟಿಂಗ್​​ನಲ್ಲಿದ್ದಿದ್ದೇ ಹೆಚ್ಚು. ಇದರಿಂದ ಫ್ಯಾಮಿಲಿ ಜೊತೆ ಕಳೆಯೋಕೆ ಟೈಮ್​ ಸಿಕ್ಕಿರ್ಲಿಲ್ಲ. ಹೀಗಾಗಿ ಅಪ್ಪು ಫ್ಯಾಮಿಲಿ ಜೊತೆ ಟೈಮ್​ ಸ್ಟೆಂಡ್​ ಮಾಡಿದ್ರು. ಪವರ್​ ಸ್ಟಾರ್​ ಈಗ ಕಲರ್ಸ್ ಕನ್ನಡ ವಾಹಿನಿಯ ‘ಫ್ಯಾಮಿಲಿ ಪವರ್ ಶೋ ನಡೆಸ್ತಿರೋದು ನಿಮ್ಗೂ ಗೊತ್ತಿದೆ.

ಮಧ್ಯೆ ಮಧ್ಯೆ ಇದರ ಶೂಟಿಂಗ್​ ಇದ್ದೇ ಇದೆ. ಇದರ ಜೊತೆಗೆ ಪಿ.ಆರ್.ಕೆ ಪ್ರೋಡಕ್ಷನ್ ಕೆಲಸದಲ್ಲೂ ಅಪ್ಪು ಬಿಜಿ ಇದ್ರು. ಪಿ.ಆರ್.ಕೆ ಪ್ರೋಡಕ್ಷನ್ ಕಂಪೆನಿ ಅಡಿಯಲ್ಲಿ ಎರಡು ಸಿನಿಮಾ ನಿರ್ಮಾಣ ಆಗ್ತಿದೆ. ಈ ಎಲ್ಲಾ ಕಾರಣದಿಂದ ಹೊಸ ಸಿನಿಮಾ ಟೇಕಾಫ್​ ಆಗಿರ್ಲಿಲ್ಲ ಇದೀಗ ಇದೀಗ ಸದ್ದು ಸುದ್ದಿಯಿಲ್ಲದೇ ಅಪ್ಪು ನಟನೆಯ ಹೊಸ ಸಿನಿಮಾದ ಮುಹೂರ್ತ ನಡೆದಿದೆ. ಹಾಗ್​​ ನೋಡಿದ್ರೆ ಅಪ್ಪು ಕಾಲ್​ಶೀಟ್​ಗೆ ನಿಂತಿದ್ದವರು ಕ್ಯೂ ತುಂಬಾ ದೊಡ್ಡದಿತ್ತು. ಹೀಗಾಗಿ ದೊಡ್ಮನೆ ಹುಡ್ಗ ಯಾರಿಗೆ ಓಕೆ ಹೇಳ್ತಾರೆ ಅನ್ನುವ ಕುತೂಹಲವೂ ಇತ್ತು. ಪುನೀತ್​​ ದೊಡ್ಡ ಪ್ರೊಡಕ್ಷನ್​​​ಗೆ ಮೊದಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಪುನೀತ್ ಹೊಸ ಸಿನಿಮಾ ಸೆಟ್ಟೇರಿದೆ. ಇದಕ್ಕೂ ಮುಂಚೆ ಪುನೀತ್ ಜೊತೆ 2 ಹಿಟ್ ಸಿನಿಮಾ ಮಾಡಿರುವ ರಾಕ್ ಲೈನ್ ಈಗ ನಾಲ್ಕನೇ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಪುನೀತ್ ಅಭಿನಯದ ‘ಮೌರ್ಯ’, ಮತ್ತು ‘ಅಜಯ್’ ಸಿನಿಮಾವನ್ನ ನಿರ್ಮಾಣ ಮಾಡಿದ್ದರು. ಇನ್ನು ಪವರ್​ ಸ್ಟಾರ್​ ನಟನೆಯ ಈ ಸಿನಿಮಾಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಪುನೀತ್ ಜೊತೆ ‘ರಣವಿಕ್ರಮ’ ಸಿನಿಮಾ ಮಾಡಿದ್ದರು. ಇದೀಗ ಎರಡನೇ ಬಾರಿ ಈ ಜೋಡಿ ಜೊತೆಯಾಗಿದೆ. ಪವನ್​ ಒಡೆಯರ್​ ಪುನೀತ್​ಗೆ ಆ್ಯಕ್ಷನ್​ ಕಟ್​ ಹೇಳಳಿದ್ದಾರೆ ಅನ್ನುವ ಸುದ್ದಿ ಮೊದಲೇ ಇತ್ತು. ಇದೀಗ ಅದು ಸತ್ಯ ಆಗಿದೆ. ​

ವಿಶೇಷ ಅಂದ್ರೆ ಚಿತ್ರಕ್ಕೆ ಅಧಿಪತಿ ಅಂತ ಖಡಕ್​​ ಟೈಟಲ್​​ ಫಿಕ್ಸ್​ ಆಗಿದೆ. ಆದ್ರೆ ಸಿನಿಮಾದಲ್ಲಿ ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಸ್ಟೋರಿ ಇರಲಿದೆ. ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಕ್ಲಾಪ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು.ಸೈಲೆಂಟ್ ಆಗಿ ಮುಹೂರ್ತ ಮಾಡಿಕೊಂಡಿರುವ ಚಿತ್ರತಂಡ ನಾಯಕಿಯನ್ನ ಅಂತಿಮ ಮಾಡಿಲ್ಲ. ಆದ್ರೆ ಮಾರ್ಚ್ 8 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.