ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಏರಿದ ಪುನೀತ್ ರಾಜಕುಮಾರ್!!

ನಟ ಪುನೀತ್​​ ಮೈಸೂರಿಗೆ ಭೇಟಿ ನೀಡಿದಾಗಲೆಲ್ಲ ಚಾಮುಂಡೇಶ್ವರಿ ದರ್ಶನಕ್ಕೆ ತೆರಳೋದನ್ನು ಮರೆಯೋದಿಲ್ಲ.

ಅಷ್ಟೇ ಅಲ್ಲ ಪ್ರತಿಭಾರಿಯೂ ಚಾಮುಂಡೇಶ್ವರಿ ದರ್ಶನಕ್ಕೆ ಅವರು ಬರಿಗಾಲಿನಲ್ಲೇ ತೆರಳುತ್ತಾರೆ. ಈ ಭಾರಿಯೂ ಮೈಸೂರಿಗೆ ಬಂದ ಪುನೀತ್​ ಬರಿಗಾಲಿನಲ್ಲೇ ಚಾಮುಂಡಿಬೆಟ್ಟ ಏರಿದರು. ಪಾರ್ವತಮ್ಮ ರಾಜಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಶಕ್ತಿಧಾಮದ ನೂತನ ಕಟ್ಟಡ ಉದ್ಘಾಟನೆಗೆ ಪುನೀತ್ ರಾಜಕುಮಾರ್ ಮೈಸೂರಿಗೆ ಬಂದಿದ್ದರು.

ಈ ವೇಳೆ ಬೆಳ್ಳಂ ಬೆಳಗ್ಗೆ ಪುನೀತ್ ರಾಜಕುಮಾರ್ ಚಪ್ಪಲಿ ಹಾಕದೇ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆದರು.
ಇನ್ನು ಶನಿವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರು ಸಾಮಾನ್ಯರಂತೆ ಬರಿಗಾಲಿನಲ್ಲಿ ನಡೆದು ಬಂದ ಪುನೀತ್ ರಾಜಕುಮಾರ್​ ಕಂಡು ಖುಷಿ ಪಟ್ಟರು. ಅಷ್ಟೇ ಅಲ್ಲ ಸೆಲ್ಪಿಗೆ ಮುಗಿಬಿದ್ದರು.