ರಾಹುಲ್ ಗಾಂಧಿ ಮಾತನಾಡುವಾಗ ಮೋದಿ ನಿಲ್ಲಲ್ಲ ಯಾಕೆ ಗೊತ್ತಾ ? ರಾಗಾಗೆ 15 ನಿಮಿಷ ಮಾತನಾಡಲು ಅವಕಾಶ !! ಷರತ್ತುಗಳೇನು ಗೊತ್ತಾ ?

ನಾನು ಸಂಸತ್ತಿನಲ್ಲಿ ಹದಿನೈದು ನಿಮಿಷ ಮಾತನಾಡಿದರೆ ಪ್ರಧಾನಿ ನರೇಂದ್ರ ಮೋದಿಯವರು ನಿಲ್ಲಲ್ಲ ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಸವಾಲು ಹಾಕಿದ್ದಾರೆ.

 

ಇಂದು ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಹದಿನೈದು ನಿಮಿಷ ಮಾತನಾಡಿದ್ರೆ ಪ್ರಧಾನಿಯವರು ನಿಲ್ಲಲ್ಲ ಎಂದಿದ್ದಾರೆ. ಹೌದು. ನಾನು ನಿಲ್ಲಲ್ಲ. ಯಾಕೆಂದರೆ ನೀವು ಹೆಸರಿಗಾಗಿ ಇರುವವರು. ನಾನು ಕೆಲಸ ಮಾಡಿ ಬದುಕುವವನು. ನಿಮ್ಮ ಹದಿನೈದು ನಿಮಿಷದ ಭಾಷಣ ಕೇಳಿ ನಿಲ್ಲೋಕೆ ಸಮಯವಿಲ್ಲ. ಇಷ್ಟಕ್ಕೂ ನೀವು ಹದಿನೈದು ನಿಮಿಷ ಮಾತನಾಡುತ್ತೀರಿ ಎನ್ನುವುದೇ ನನಗೆ ಆಶ್ಚರ್ಯ ದಿಗ್ಬ್ರಮೆ ಮೂಡಿಸುತ್ತದೆ” ಎಂದು ವ್ಯಂಗ್ಯ ಮಾಡಿದ್ದಾರೆ.

 

“ಸಂಸತ್ತಿನಲ್ಲಿ ಹದಿನೈದು ನಿಮಿಷ ಮಾತನಾಡುವುದು ಒತ್ತಟ್ಟಿಗಿರಲಿ. ಕರ್ನಾಟಕದಲ್ಲಿ ಅವರದ್ದೇ ಸರಕಾರ ಇದೆ. ಅವರ ಸರಕಾರದ ಸಾಧನೆಗಳ ಬಗ್ಗೆ ಹದಿನೈದು ನಿಮಿಷ ಕಾಗದ ನೋಡದೇ ಮಾತನಾಡಲಿ. ಆ ಹದಿನೈದು ನಿಮಿಷದ ಭಾಷಣದಲ್ಲಿ ಒಂದು ಐದು ಬಾರಿ ಮಾನ್ಯ ವಿಶ್ವೇಶ್ವರಯ್ಯವರ ಹೆಸರು ಇರಲಿ” ಎಂದು ವ್ಯಂಗ್ಯಭರಿತ ಸವಾಲು ಹಾಕಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here