ರಾಹುಲ್​ ಗಾಂಧಿ ಟ್ವೀಟ್​​ಗೆ ಪ್ರೇರಣೆ ಯಾರು ಗೊತ್ತಾ- ತಮ್ಮ ಪೇಜ್​ನಲ್ಲಿ ಗುಟ್ಟು ಬಿಟ್ಟು ಕೊಟ್ಟ ಕಾಂಗ್ರೆಸ್ ಯುವರಾಜ.

ಕಾಂಗ್ರೆಸ್ ನ ಯುವರಾಜ ಹಾಗೂ ಭಾವಿ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗುವ ರಾಹುಲ್ ಗಾಂಧಿ ಸದಾ ತಮ್ಮ ಮಾತು ಹಾಗೂ ಟ್ವಿಟ್ ಗಳಿಂದಲೇ ವಿವಾದ ಸೃಷ್ಟಿಸಿಕೊಳ್ಳುತ್ತಾರೆ. ಆದರೇ ಈ ಭಾರಿ ತಮ್ಮ ಟ್ವಿಟ್ ಗಳಿಗೆ ಪ್ರೇರಣೆ ಯಾರು ಎಂಬ ಜನಸಾಮಾನ್ಯರ ಕುತೂಹಲದ ಪ್ರಶ್ನೆಗೆ ತಮ್ಮ ಹಾಸ್ಯ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ ರಾಹುಲ್ ಗಾಂಧಿ.

ಟ್ವಿಟರ್‌ನಲ್ಲಿ ಈ ಬಗ್ಗೆ ಟ್ವಿಟ್‌ ಮಾಡಿರುವ ರಾಹುಲ್, ಭಾನುವಾರ ತಮ್ಮ ನಾಯಿಯ ಜೊತೆಗಿರುವ ಪೋಟೋ ಅಪ್ ಲೋಡ್ ಮಾಡಿದ್ದು, ಈ ವ್ಯಕ್ತಿಯ ಪರ ಟ್ವಿಟ್ ಮಾಡುವುದು ಯಾರು ಎಂದು ಜನ ಪ್ರಶ್ನಿಸುತ್ತಿದ್ದಾರೆ. ನಾನು ಪಿಡಿ ಈತನಿಗಿಂತ ಚುರುಕಾಗಿದ್ದೇನೆ. ನೋಡಿ ನಾನು ಟ್ವಿಟ್ ಮಾಡುತ್ತೇನೆ ಎನ್ನುವ ಮೂಲಕ ತಮ್ಮ ಪೇಜ್ ನಲ್ಲಿ ಪಿಡಿ ಟ್ವಿಟ್ ಮಾಡುತ್ತದೆ ಎಂಬ ಸಂದೇಶ ನೀಡಿದ್ದಾರೆ.

ರಾಹುಲ್ ಈ ‌ಮೆಸೆಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಜನರು ರಾಹುಲ್ ಗಾಂಧಿ ಟ್ವಿಟ್ ಬಗ್ಗೆ ಪರ-ವಿರೋಧದ ಅಭಿಪ್ರಾಯ ಹರಿಬಿಡತೊಡಗಿದ್ದಾರೆ.