ಮೊನ್ನೆ ಜನಾರ್ಧನ ಪೂಜಾರಿ ಇಂದು ರಮಾನಾಥ ರೈ – ಇದು ಕಣ್ಣೀರಿನ ರಾಜಕೀಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ನಾಯಕರು ಕಣ್ಣೀರಿಡೋ ಸರದಿ ಮುಂದುವರೆದಿದೆ. ಮೊನ್ನೆ ಜನಾರ್ಧನ ಪೂಜಾರಿ ಕಣ್ಣಲ್ಲಿ ನೀರು ತರಿಸಿದ್ದ ಸಚಿವ ರಮಾನಾಥ ರೈ ತಾವೇ ಕಣ್ಣೀರಿಟ್ಟಿದ್ದಾರೆ. ನಿನ್ನೆ ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರೈ ಭಾಷಣ ಮಾಡುತ್ತಾ ಗದ್ಗದಿತರಾದ್ರು. ಪೂಜಾರಿ ವಿರುದ್ಧ ನಾನು ಅವಹೇಳನಕಾರಿಯಾಗಿ ಮಾತ್ನಾಡಿಲ್ಲ. ಒಂದು ವೇಳೆ ನಾನು ಕೀಳುಪದ ಉಪಯೋಗಿಸಿದ್ದೇನೆ ಅಂತಾ ಅವರ ಮನೆಯವರಿಗೆ ಅನ್ನಿಸಿದ್ರೆ ಆಣೆ ಪ್ರಮಾಣಕ್ಕೆ ಕರೆಯಲಿ ಅಂದ್ರು.

ಇನ್ನು ಇತ್ತೀಚೆಗಷ್ಟೇ ಸಚಿವ ರಮಾನಾಥ ರೈ ತನ್ನನ್ನು ಏಕ ವಚನದಲ್ಲಿ ನಿಂದಿಸಿದ್ದಾರೆಂಬ ಮಾತು ಕೇಳಿ ಬಿಲ್ಲವ ಸಮುದಾಯ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪೂಜಾರಿ ಕಣ್ಣೀರಿಟ್ಟಿದ್ದರು.

ಪ್ರತ್ಯುತ್ತರ ನೀಡಿ

Please enter your comment!
Please enter your name here