ರಸ್ತೆ ಬದಿ ಹೊಟೇಲ್​​ನಲ್ಲಿ ಮಿರ್ಚಿ-ಮಂಡಕ್ಕಿ ಜೊತೆ ಟೀ ಸವಿದ ಕಾಂಗ್ರೆಸ್​ ಯುವರಾಜ!

Raichur: Rahul Gandhi having Roadside hotel Mirchi Bajji
Raichur: Rahul Gandhi having Roadside hotel Mirchi Bajji

ನಾಲ್ಕು ದಿನಗಳ ಹೈದ್ರಾಬಾದ್​ ಕರ್ನಾಟಕ ಭೇಟಿಗೆ ಬಂದಿರುವ ರಾಹುಲ್​ ಗಾಂಧಿ ರಾಜ್ಯಪ್ರವಾಸ ಇಂದು ರಾಯಚೂರು ಜಿಲ್ಲೆಯಾದ್ಯಂತ ನಡೆಯಿತು.

 

ಎಐಸಿಸಿ ಅಧ್ಯಕ್ಷ ರಾಹುಲ್​​ಗಾಂಧಿ 3ನೇ ದಿನದ ರೋಡ್ ಶೋ ಅಂಗವಾಗಿ ಸರ್ಕ್ಯೂಟ್ ಹೌಸ್​ನಿಂದ ರೋಡ್​ ಶೋ ಆರಂಭಿಸಿದರು.
ರಾಯಚೂರಿನ ಸರ್ಕೂಟ್​​​ ಹೌಸ್​ನಿಂದ ಹೊರಟ ರೋಡ್ ಶೋ ಗಂಜ್​ ವರೆಗೆ ನಡೆಯಿತು. ಗಂಜ್​ ಸರ್ಕಲ್​ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ರಾಹುಲ್​ ಭಾಷಣ ಮಾಡಿದ್ರು. ಇದಾದ ಬಳಿಕ ಗಂಜ್ ರಸ್ತೆಯಿಂದ ಬಸವೇಶ್ವರ ವೃತ್ತದವರೆಗೆ ರೋಡ್ ಶೋ ನಡೆಸಿದ್ರು. ಇದೇ ವೇಳೆ ರಾಯಚೂರಿನ ಶಂಶಾಲಂ ದರ್ಗಾಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ರಾಹುಲ್​ ಪ್ರಾರ್ಥನೆ ಸಲ್ಲಿಸಿದ್ದರು.  ಬಳಿಕ ರಾಹುಲ್​ ಬಸವೇಶ್ವರ್​ ವೃತ್ತದಿಂದ ದೇವದುರ್ಗದತ್ತ ಹೊರಟರು.

 

 

ಈ ವೇಳೆ ಕಲ್ಮಲಾದಲ್ಲಿ ರೋಡ್​ ಶೋ ಮುಗಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಸ್ತೆ ಬದಿಯ ಹೊಟೇಲ್​​ನ್ಲಲಿ ಮಿರ್ಚಿ ಸವಿದರು. ಮೌಲಾಸಾಬ್​ ಎಂಬುವವರ ಹೊಟೇಲ್​ನಲ್ಲಿ ಬಜ್ಜಿ,ಗಿರಮಿಟ್​​ ಚಹಾ ಸೇವಿಸಿದ ರಾಹುಲ್​ ಮಿರ್ಚಿ ಬಜ್ಜಿ ಚೆನ್ನಾಗಿದೆ ಅಂತ ಹೊಟೇಲ್​ ಮಾಲೀಕನಿಗೆ ಹೇಳಿದರು.  ಸಿಎಂ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಜಿ ಪರಮೇಶ್ವರ್,ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್​ ಹಿರಿಯ ನಾಯಕರು ರಾಹುಲ್​ ಗಾಂಧಿಗೆ ಬಜ್ಜಿ ಸವಿಯುವ ವೇಳೆ ಸಾಥ್​ ನೀಡಿದರು. ಬಜ್ಜಿ ಸವಿದ ಬಳಿಕ ಹೊಟೇಲ್ ಮಾಲೀಕನಿಗೆ ರಾಹುಲ್​ 2 ಸಾವಿರ ರೂಪಾಯಿ ನೀಡಿದರು. ಅಲ್ಲದೇ ಹೊಟೇಲ್​ ಮಾಲೀಕನ ಕುಶಲೋಪರಿ ವಿಚಾರಿಸಿದ ರಾಹುಲ್ ಗಾಂಧಿ ದಿನವೊಂದಕ್ಕೆ ಎಷ್ಟು ವ್ಯಾಪಾರ ಆಗುತ್ತೆ ಎಂದು ಕೂಡ ಪ್ರಶ್ನಿಸಿದರು. ಒಟ್ಟಿನಲ್ಲಿ ಮೋದಿ ಪಕೋಡಾ ವಿರುದ್ಧ ಕಿಡಿಕಾರಿದ್ದ ಕಾಂಗ್ರೆಸ್ಸಿಗರು ಒಟ್ಟಾಗಿ ಬಜ್ಜಿ ಸವಿದು ಸಂಭ್ರಮಿಸಿದರು.