ಕ್ಯಾನ್ಸರ್​ ಗೆದ್ದರೂ ಮರಣ ಮಳೆಯಲ್ಲಿ ಕರೆದೊಯ್ದ ಜವರಾಯ ಕ್ಯಾನ್ಸರ್​ನಿಂದ ಇತ್ತೀಚೆಗಷ್ಟೆ ಚೇತರಿಸಿಕೊಂಡಿದ್ದ ಭಾರತಿ ಸಾವು ಮಳೆಯಲ್ಲಿ ಕಾರ್​ ಮೇಲೆ ಮರ ಬಿದ್ದು ಪತಿ ಜೊತೆ ಸಾವನ್ನಪ್ಪಿದ ಭಾರತಿ ಮಿನರ್ವ ಸರ್ಕಲ್​ನಲ್ಲಿ ಕಾರ್​ ಮೇಲೆ ಮರ ಬಿದ್ದು ಮೂವರ ದುರ್ಮರಣ ಕಾರ್​ನಲ್ಲಿ ಪತಿ ರಮೇಶ್, ಸಹೋದರ​ ಜಗದೀಶ್​ ಜೊತೆ ತೆರಳುತ್ತಿದ್ದ ಭಾರತಿ ಬಿಬಿಎಂಪಿಯಲ್ಲಿ ಹೋಮ್​ ಗಾರ್ಡ್​ ಆಗಿ ಸೇವೆ ಸಲ್ಲಿಸುತ್ತಿದ್ದ ಭಾರತಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡ್ರು ಮರಣ ಮಳೆಯಲ್ಲಿ ಸಾವು  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂವರು ಶವಗಳ ಮರಣೋತ್ತರ ಪರೀಕ್ಷೆ
——————————————–

ಇತ್ತ, ಧಾರಕಾರ ರಣ ಮಳೆಗೆ ನೀಲಗಿರಿ ಮರಬಿದ್ದ ಮೂವರು ಸಾವನ್ನಪ್ಪಿರುವ ಘಟನೆ ಮಿನರ್ವ ವೃತ್ತ ಸಮೀಪದ ಡಿಸ್ಪೆನ್ಸರಿ ರಸ್ತೆಯಲ್ಲಿ ನಡೆದಿದೆ. ದುರಂತದಲ್ಲಿ ಕಾರಿನೊಳಗಿದ್ದ ಸುಂಕದಕಟ್ಟೆಯ 42 ವರ್ಷದ ರಮೇಶ್ ಹಾಗೂ 38 ವರ್ಷದ ಅವರ ಪತ್ನಿ ಭಾರತಿ ಹಾಗೂ 42 ವಯೋಮಾನದವರಾದ ಭಾರತಿ ಅಣ್ಣ ಜಗದೀಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಮೇಶ್‌ ಅವರ 10 ವರ್ಷದ ಮಗ ಲೋಹಿತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತ ರಮೇಶ್​​ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯೊಂದರಲ್ಲಿ ವ್ಯವಸ್ಥಾ‍ಪ‍ಕರಾಗಿದ್ರು. ಅದೇ ಕಾರ್ಖಾನೆಯಲ್ಲಿ ಜಗದೀಶ್‌ ಕೂಡ ಟೈಲರ್‌ ಆಗಿದ್ರು. ಭಾರತಿ ಅವರು ಗೃಹರಕ್ಷಕದಳದಲ್ಲಿ ಕೆಲಸ ಮಾಡುತ್ತಿದ್ದರು ಅಂತಾ ಕಲಾಸಿಪಾಳ್ಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಎಸ್ಟೀಂ ಕಾರು ಹೊಂದಿದ್ದ ರಮೇಶ್‌, ಅದರ ದುರಸ್ತಿಗಾಗಿ ಕಲಾಸಿಪಾಳ್ಯದ ಗ್ಯಾರೇಜ್‌ಗೆ ಬಂದಿದ್ರು. ರಾತ್ರಿ 7 ಗಂಟೆಯ ಸುಮಾರಿಗೆ ದುರಸ್ತಿ ಕೆಲಸ ಮುಗಿಸಿದ್ದ ಗ್ಯಾರೇಜ್‌ ಸಿಬ್ಬಂದಿ, ಕಾರು ಹಸ್ತಾಂತರಿಸಿದ್ದರು. ಬಳಿಕ ಮನೆಗೆ ಹೊರಟಿದ್ದರು. ಅದೇ ವೇಳೆ ಮಳೆ ಜೋರಾಗಿ ಬರುತ್ತಿದ್ದರಿಂದ ಮರದ ಕೆಳಗೆ ಕಾರು ನಿಲ್ಲಿಸಿದ್ದಾರೆ. ಕೆಲ ನಿಮಿಷಗಳಲ್ಲೇ ಮರವು ಕಾರಿನ ಮೇಲೆ ಉರುಳಿಬಿದ್ದಿದೆ. ಮರ ಬಿದ್ದ ರಭಸಕ್ಕೆ ಮೂವರ ಪ್ರಾಣಪಕ್ಷಿ ಹಾರಿಹೋಗಿದ್ದು ಕಾರು ನಜ್ಜುಗುಜ್ಜಾಗಿದೆ. ಕೂಡಲೇ ಸಹಾಯಕ್ಕೆ ಬಂದ ಸ್ಥಳೀಯರು, ಸೀಟ್​ನಲ್ಲಿ ಸಿಲುಕಿದ್ದ ರಮೇಶ್​ ಅವ್ರ ಲೋಹಿತ್‌ನನ್ನು ರಕ್ಷಿಸಿ ಹೊರಗೆ ತಂದಿದ್ದಾರೆ. ಇನ್ನು, ಸ್ಥಳಕ್ಕೆ ಮೇಯರ್​ ಪದ್ಮಾವತಿ ಭೇಟಿ ಪರಿಶೀಲನೆ ನಡೆಸಿದ್ರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here