ಅಣ್ಣಾವ್ರನ್ನು ಹಾಡಿ ಹೊಗಳಿದ ರಜನಿ. . ಏನು ಹೇಳಿದ್ರು ನೀವೇ ನೋಡಿ..

ಕನ್ನಡ ನಾಡು ಕಂಡ ಮೇರುನಟ, ದಾದಾ ಸಾಪೇಬ್ ಫಾಲ್ಕ ಡಾ ರಾಜ್ ಕುಮಾರ್ ಅವರನ್ನ ಸೂಪರ್ ಸ್ಟಾರ್ ರಜನೀಕಾಂತ್ ಹಾಡಿ ಹೊಗಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಅಣ್ಣಾವ್ರನ್ನ ಗುಣಗಾನ ಮಾಡಿದ್ದಾರೆ. ರಾಜ್ ಕುಮಾರ್ ಒಬ್ಬ ಶ್ರೇಷ್ಠ ವ್ಯಕ್ತಿ. ನಾನು ಅವರ ದೊಡ್ಡ ಅಭಿಮಾನಿ.

 

ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಾನು ನೋಡುತ್ತಿದ್ದೆ. ಅವರ ಕಾಲಿಗೆ ನಮಸ್ಕರಿಸುವುದೇ ಪರಮ ಭಾಗ್ಯ. ಅವರ ಪಾದ ಸ್ಪರ್ಶಿಸುವುದಕ್ಕೆ ಕಾದು ಕುಳಿತುಕೊಳ್ಳುತ್ತಿದ್ದೆ. ನಾಟಸಾರ್ವಭೌಮನ ಕಾಲಿಗೆ ನಮಸ್ಕರಿಸಿದ್ದು ನಿಜಕ್ಕೂ ಸ್ಮರಣೀಯ ಅನುಭವ. ಅವರು ಒಬ್ಬ ಅದ್ಭುತ ಅಪ್ರತಿಮ ನಟ. ನಾನು ಅವರ ಆದರ್ಶಗಳಿಗೆ ಮಾರು ಹೋಗಿದ್ದೆ. ಶಿವಾಜಿ ಗಣೇಶ್, ಎಂ ಜಿ ರಾಮಚಂದ್ರನ್ ಇಬ್ಬರೂ ಒಬ್ಬ ರಾಜಕುಮಾರನಿಗೆ ಸಮಾನ ಅಂತ ಅಭಿಮಾನಿಗಳ ಸಂವಾದದಲ್ಲಿ ಕೊಂಡಾಡಿದ್ದಾರೆ.