Rajya Sabha election: Cross-voting rules early hours of Gujarat Rajya | ಅಮಿತ್​​ ಶಾ-ಅಹ್ಮದ್​ ಪಟೇಲ್​​​​ ಜಿದ್ದಾಜಿದ್ದಿ ಸಮರದಲ್ಲಿ ‘ಕೈ’ ಮೇಲು ಕೇಸರಿ ನಾಯಕನ ರಣತಂತ್ರ ಭೇದಿಸಿದ ಅಹ್ಮದ್​ ಪಟೇಲ್​​

0
20

ಅಮಿತ್​​ ಶಾ-ಅಹ್ಮದ್​ ಪಟೇಲ್​​​​ ಜಿದ್ದಾಜಿದ್ದಿ ಸಮರದಲ್ಲಿ ‘ಕೈ’ ಮೇಲು
ಕೇಸರಿ ನಾಯಕನ ರಣತಂತ್ರ ಭೇದಿಸಿದ ಅಹ್ಮದ್​ ಪಟೇಲ್​​
ಗುಜರಾತ್​​ ರಾಜ್ಯಸಭೆ ಸಮರದಲ್ಲಿ ಮಾನ ಉಳಿಸಿದ ಡಿಕೆಶಿ
ಸೋನಿಯಾ ಪರಮಾಪ್ತ ಪಟೇಲ್​​ ಗೆಲುವು ಬಹುತೇಕ ಖಚಿತ
ಅಹ್ಮದ್​ ಪಟೇಲ್​​​ಗೆ 45 ಎಂಎಲ್​ಎಗಳ ಪೈಕಿ 43 ಮಂದಿ ಬೆಂಬಲ
ಇಬ್ಬರು ಕಾಂಗ್ರೆಸ್ ಶಾಸಕರು ಕೈಕೊಟ್ಟರೂ ಅನ್ಯ ಪಕ್ಷದ ಬಲ
ಜೆಡಿಯು,ಎನ್​ಸಿಪಿಯ ತಲಾ ಒಬ್ಬರಿಂದ ಕಾಂಗ್ರೆಸ್​ಗೆ ಸಪೋರ್ಟ್​
ಅಹ್ಮದ್​ ಪಟೇಲ್​​ ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ 45 ಮತ ಅಗತ್ಯ
ಬೆಂಗಳೂರಿಗೆ 44 ಶಾಸಕರನ್ನು ಕರೆತಂದು ರಕ್ಷಿಸಿದ್ದ ಕಾಂಗ್ರೆಸ್

======
ಗುಜರಾತ್​ನಲ್ಲಿ ಅಹ್ಮದ್ ಪಟೇಲ್ ಗೆಲುವು ಬಹುತೇಕ ಖಚಿತವಾಗಿದೆ. ಅಮಿತ್​ ಶಾ ರಣತಂತ್ರದ ಮಧ್ಯೆ ರಾಜ್ಯಸಭೆಗೆ ಅಹ್ಮದ್ ಪಟೇಲ್​ ಎಂಟ್ರಿ ಆಗೋದು ನಿಶ್ಚಿತವಾಗಿದೆ. ಕಾಂಗ್ರೆಸ್​ನ 44 ಶಾಸಕರ ಪೈಕಿ ಕರಮ್​​ ಸಿಂಹ ಮಕವಾಡ ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗ್ತುತ್ತಿದೆ. ಆದ್ರೆ ಕಾಂಗ್ರೆಸ್​ ಅಭ್ಯರ್ಥಿ ಅಹ್ಮದ್​ ಪಟೇಲ್​​ಗೆ ಜೆಡಿಯುನ ಒಬ್ಬ ಮತ್ತು ಎನ್​ಸಿಪಿಯ ಒಬ್ಬ ಶಾಸಕರು ಬೆಂಬಲ ನೀಡಿದ್ದಾರೆ ಅನ್ನೋ ಮಾಹಿತಿ ಸಿಗ್ತಿದೆ.
ಮೂರು ಸ್ಥಾನಗಳಿಗೆ ಅಮಿತ್​ ಶಾ, ಸ್ಮೃತಿ ಇರಾನಿ, ಅಹ್ಮದ್ ಪಟೇಲ್​​ ಮತ್ತು ಬಲವಂತ್​ ಸಿಂಹ ರಜಪೂತ್​​ ಕಣದಲ್ಲಿದ್ದಾರೆ. ತಲಾ ಒಬ್ಬ ಅಭ್ಯರ್ಥಿ ಆಯ್ಕೆಗೆ 45 ಪ್ರಥಮ ಪ್ರಾಶಸ್ತ್ಯದ ಮತಗಳು ಅಗತ್ಯ ಇವೆ. ಒಟ್ಟು 182 ಶಾಸಕರ ಬಲ ಹೊಂದಿರುವ ಗುಜರಾತ್​​ ವಿಧಾನಸಭೆಯಲ್ಲಿ ಬಿಜೆಪಿಯ 121 ಶಾಸಕರು, ಕಾಂಗ್ರೆಸ್​ 51 ಶಾಸಕರು, ಎನ್​ಸಿಪಿಯ ಇಬ್ಬರು, ಜೆಡಿಯುನ ಒಬ್ಬ ಮತ್ತು ಒಬ್ಬ ಪಕ್ಷೇತರ ಶಾಸಕರಿದ್ದಾರೆ. ಈ ಪೈಕಿ ಕಾಂಗ್ರೆಸ್​ಗೆ ವಘೇಲಾ ಸೇರಿ 6 ಮಂದಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್​ ಬಲ 45ಕ್ಕೆ ಕುಸಿದಿದೆ. 182 ಸ್ಥಾನಗಳ ಪೈಕಿ 6 ಶಾಸಕ ಸ್ಥಾನಗಳು ಖಾಲಿ ಇವೆ.
ಭಾರೀ ಜಿದ್ದಾಜಿದ್ದಿ ಮತ್ತು ಪ್ರತಿಷ್ಠೆಗೆ ಕಾರಣವಾಗಿರುವ ಗುಜರಾತ್ ರಾಜ್ಯಸಭಾ ಚುನಾವಣೆಯ ಮತದಾನ ಇವತ್ತು ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಎಐಸಿಸಿ ಅಧ್ಯಕ್ಷೆ ಸೊನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಕಣದಲ್ಲಿದ್ದಾರೆ.
==
ಇನ್ನು ಕಾಂಗ್ರೆಸ್ ಶಾಸಕರನ್ನ ಸೆಳೆದು ಅಹ್ಮದ್ ಪಟೇಲ್​ ಸೋಲಿಸಲು ಬಿಜೆಪಿ ಕಸರತ್ತು ಮಾಡಿತ್ತು. ಆಪ​ರೇಷನ್​ ಕಮಲ ಮೂಲಕ 6 ಕಾಂಗ್ರೆಸಿಗರ ರಾಜೀನಾಮೆ ಕೊಡಿಸಿ ತಂತ್ರ ರೂಪಿಸಿತ್ತು. ಬಿಜೆಪಿಗೆ ಸಪೋರ್ಟ್ ಮಾಡಿದ್ದಾರೆ. ಇನ್ನು ಬಿಜೆಪಿ ನಾಯಕರು ಪ್ರತಿ ಶಾಸಕರಿಗೆ 15 ಕೋಟಿ ಆಮೀಷ ಒಡ್ಡಿದ್ದರು ಅಂತ ಸ್ವತಃ ಕಾಂಗ್ರೆಸ್​ ಶಾಸಕರೇ ಆರೋಪಿಸಿದ್ದರು. ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದ್ರಲ್ಲಿ ಕುದುರೆ ವ್ಯಾಪಾರ ತಪ್ಪಿಸಲು ಗುಜರಾತ್​ನ 44 ಮಂದಿ ಕಾಂಗ್ರೆಸ್​ ಶಾಸಕರು ರಾತ್ರೋರಾತ್ರಿ ಬೆಂಗಳೂರಿಗೆ ಆಗಮಿಸಿ ಬಿಡದಿಯ ಈಗಲ್​ಟನ್ ರೆಸಾರ್ಟ್​ನಲ್ಲಿ ತಂಗಿದ್ದರು. ಇವರ ಉಸ್ತುವಾರಿಯನ್ನ ಸಚಿವ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ವಹಿಸಿಕೊಂಡಿದ್ದರು. ಇದಾದ 2ನೇ ದಿನವೇ ಡಿಕಶಿ ಮತ್ತು ಸಂಬಂಧಿಕರು, ಆಪ್ತರ ಮೇಲೆ ಐಟಿ ರೇಡ್ ನಡೆದಿತ್ತು. ಆದ್ರೆ ಕಾಂಗ್ರೆಸ್​ ಶಾಸಕರು ಅಹ್ಮದ್​ ಪಟೇಲ್​ಗೆ ವೋಟ್​ ಮಾಡ್ತಾರ ಅನ್ನೋದು ಭಾರೀ ಕುತೂಹಲ ಮೂಡಿಸಿದೆ. ಹೀಗಾಗಿ ಇವತ್ತಿನ ರಾಜ್ಯಸಭಾ ಚುನಾವಣೆಯ ಮತದಾನ ದೇಶದ ಗಮನ ಸೆಳೆದಿದೆ.
====

LEAVE A REPLY

Please enter your comment!
Please enter your name here