ರಮ್ಯ ಸೋಲಿಗೆ ಅಂಬರೀಶ್​ ಕಾರಣ! ಸುಮಲತಾ ಕಣ್ಣೀರನ್ನು ನಂಬಬೇಡಿ! ನಟಿ ರಮ್ಯ ತಾಯಿ ರಂಜಿತಾ ಸ್ಪೋಟಕ ಬಾಂಬ್​​​!!

ಮಂಡ್ಯ ಕ್ಷೇತ್ರದಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ರವರ ತಾಯಿ ರಂಜಿತಾರವರು ಇಂದು ಈ ಬಾರಿಯ ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರ ಸ್ವಾಮಿರವರು ಸ್ಪರ್ಧಿಸುತ್ತಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ರವರು ಸ್ಪರ್ಧಿಸುತ್ತಿದ್ದು ಅವರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ನಾನು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಬೆಂಬಲಿಸುತ್ತೇನೆ. ಮೈತ್ರಿ ಧರ್ಮವನ್ನು ಪಾಲಿಸುವ ಸಲುವಾಗಿ ನಾನು ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯ ಪರ ಪ್ರಚಾರ ನಡೆಸುತ್ತೇನೆ. ಮಂಡ್ಯದಲ್ಲಿ ಸುಮಲತಾ ಮಾಡುತ್ತಿರುವುದೆಲ್ಲಾ ನಾಟಕ, ಅವರು ಮಾತನಾಡುತ್ತಿರುವುದೆಲ್ಲಾ ಸುಳ್ಳು ಅವರ ಬಣ್ಣದ ಮಾತಿಗೆ ಯಾರು ಮರುಳಾಗಬೇಡಿ. ಈ ಬಾರಿಯ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸುಮಲತಾ ವಿರುದ್ಧ ಅತೀ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸುತ್ತಾರೆ.

ರಮ್ಯಾರವರಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಲು ಸಾಧ್ಯವಾಗದ ಕಾರಣ ,ಇಂದು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಲು ನನ್ನನ್ನು ಸ್ವತಃ ರಮ್ಯನೇ ಪ್ರಚಾರಕ್ಕೆ ಕಳುಹಿಸಿದ್ದಾರೆ. ಮಂಡ್ಯದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕೊಡುಗೆಗಳನ್ನು ಜನರಿಗೆ ಮನವರಿಕೆಗೊಳಿಸಿ ನಿಖಿಲ್ ಪರ ಮತಯಾಚನೆ ಮಾಡುವಂತೆ ಹೇಳಿದ್ದಾರೆ. ೧೬ ಹಾಗೂ ೧೭ ರಂದು ರಮ್ಯಾ ಫೇಸ್ ಬುಕ್ ನಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಮತದಾನ ಮಾಡುವಂತೆ ಬೆಂಬಲಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಮಂಡ್ಯದಲ್ಲಿ ರಮ್ಯಾ ಸೋಲಿಗೆ ಕಾರಣ ಕುರಿತು ಮಾತನಾಡಿದ ರಂಜಿತಾ ರಮ್ಯಾ ಸೋಲಿಗೆ ಕಾರಣ ಯಾರೆಂದು ಈಗಾಗಲೇ ಎಲ್ಲಾರಿಗೂ ತಿಳಿದಿರುವ ವಿಷಯ. ಅಂಬರೀಶ್ ಅನ್ನೋದು ಎಲ್ಲಾರಿಗೂ ಗೊತ್ತಿರುವ ವಿಚಾರವೇ ಅಲ್ವಾ? ಬೇರೆಯವರ ಹಾಗೆ ಅವರ ಹೆಸರು ಹೇಳಲು ನನಗೆ ಯಾವುದೇ ರೀತಿಯ ಭಯವಿಲ್ಲ, ರಮ್ಯನವರು ಮಂಡ್ಯದಲ್ಲಿ ಸೋಲಲು ಅಂಬರೀಷ್ ರವರೇ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ಅಲ್ಲದೇ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶ ಆಗಿದೆ. ಎಂಎಲ್ ಎ,ಎಂಪಿ ಗಳು ಸಹ ಸೋತಿರುವುದಕ್ಕೂ ಅಂಬರೀಷ್ ರವರೇ ಕಾರಣ. ವಿಧಾನ ಸಭಾ ಚುನವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸದ್ಯ ನಾವು ಮಂಡ್ಯದಲ್ಲಿ ಮೈತ್ರಿ ಪಕ್ಷವನ್ನು ಬೆಂಬಲಿಸುವ ಮೂಲಕ ಪುನಃ ಕಾಂಗ್ರೆಸ್ ಪಕ್ಷವನ್ನು ಉಳಿಸಬೇಕು. ಪಕ್ಷೇತರ ಅಭ್ಯರ್ಥಿ ಸುಮಲತಾರ ಮಾತಿಗೆ ಕಣ್ಣಿರಿಗೆ ಮರಳಾಗಬೇಡಿ ,ಅವರ ಹಿಂದೆ ಯಾವುದೆಲ್ಲಾ ಸತ್ಯವಿದೆ, ಯಾವುದು ಸುಳ್ಳು ಇದೆ ಎನ್ನುವುದು ಜನರಿಗೆ ತಿಳಿದಿದೆ. ಮತ್ತೆ ಅವರಿಗೆ ಮತ ನೀಡುವ ಮೂಲಕ ಜನರು ತಪ್ಪನ್ನು ಮಾಡಬೇಡಿ. ಮಂಡ್ಯದಲ್ಲಿ ರೈತರ ಹಾಗೂ ಜನರ ಸಮಸ್ಯೆಗಳಿಗೆ ಪಕ್ಷೇತರ ಅಭ್ಯರ್ಥಿಯೇ ಕಾರಣ. ಆದರಿಂದ ನಿಖಿಲ್ ಕುಮಾರಸ್ವಾಮಿಗೆ ಮತನೀಡಿ ಎಂದು ಎಐಸಿಸಿ ಸೋಶಿಯಲ್ ಮೀಡಿಯಾದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ತಾಯಿ ರಂಜಿತ ಜನರಲ್ಲಿ ಮನವಿ ಮಾಡಿಕೊಂಡರು.