ಮದುವೆ ಸಮಾರಂಭವೊಂದರಲ್ಲಿ ರಣವೀರ್​ ಕೈಯಲ್ಲಿತ್ತು ದೀಪಿಕಾ ಹೀಲ್ಸ್​ ಚಪ್ಪಲಿ! ಅಂತಹದ್ದೇನಾಯ್ತು ಗೊತ್ತಾ?!

ಇತ್ತೀಚೆಗಷ್ಟೇ ಮದುವೆಯಾಗಿದ್ದ ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್ ವೀರ್ ಸಿಂಗ್ ಸದ್ಯ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ಅದು ಹೇಗೆ ಎಂದರೆ ರಣ್ ವೀರ್ ಸಿಂಗ್ ಪತ್ನಿ ದೀಪಿಕಾ ಧರಿಸಿದ್ದ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಕೊಳ್ಳುವ ಮೂಲಕ  ಪತ್ನಿ ಪ್ರೇಮ ಮೆರೆದು ಸುದ್ದಿಯಾಗಿದ್ದಾರೆ.

ad

ಹೌದು ಇತ್ತೀಚಿಗೆ ದೀಪಿಕಾ ಹಾಗೂ ರಣ್ ವೀರ್ ದಂಪತಿ ಮುಂಬೈನ ಜೆ ಡ್ಬ್ಲೂಮ್ಯಾರಿಯಟ್ ನಲ್ಲಿದ್ದ ಆಪ್ತರ ಮದುವೆ ಸಮಾರಂಭಕ್ಕೆಂದು ತೆರಳಿದ್ದರು. ಈ ವೇಳೆ ಮದುವೆಯಲ್ಲಿ ದೀಪಿಕಾಗೆ ಅಭಿಮಾನಿಗಳ ಕಾಟ ಎದುರಾಗಿದ್ದರಿಂದ ರಣವೀರ್ ಆಕೆಯನ್ನು ರಕ್ಷಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಉದ್ದನೆಯ ಗೌನ ಧರಿಸಿದ್ದ ದೀಪಿಕಾ ಎಲ್ಲರೊಂದಿಗೆ ಮಾತನಾಡಿಸುತ್ತಿದ್ದರೇ ದೀಪಿಕಾ ಹಿಂದೆ ರಣ್ವೀರ ಆಕೆಯ ಹೈಹಿಲ್ಡ್​ ಚಪ್ಪಲಿ ಹಿಡಿದು ನಿಂತಿದ್ದರು.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ರಣ್ವೀರ್ ಹಾಗೂ ದಿಪ್ಪಿ ನಡುವಿನ ಪ್ರೀತಿಯನ್ನು ಕಂಡು ಫುಲ್ ಫಿದಾ ಆಗಿದ್ದಾರೆ. ಇನ್ನೂ ಹುಡುಗಿಯರ ಮನದಲ್ಲಿ ಅಂತು ಸಿಕ್ಕರೆ ರಣ್ವೀರ್ ನಂತಹ ಪತಿಯೆ ಸಿಗಬೇಕು, ಹಾಗೂ ಗಂಡ ಅಂದ್ರೆ ಹೀಗಿರ ಬೇಕು ಎಂದು ಅಭಿಮಾನಿಗಳಿಂದ ಕಮೆಂಟ್ಸ್ ಗಳು ಹರಿದುಬರುತ್ತಿವೆ.

ಕೆಲವು ದಿನಗಳ ಹಿಂದೆಯೂ ರಣ್ವೀರ್ ಹಾಗೂ ದೀಪಿಕಾರನ್ನು ಡಿನ್ನರ್ ಗೆಂದು ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದರು, ಈ ವೇಳೆ ಹೋಟೆಲ್ ನಿಂದ ಹೊರಬಂದ ರಣ್ವೀರ್ ದಿಪ್ಪಿ ಪ್ಯಾಂಟ್ ನ ಮೇಲೆ ಇದ್ದ ಕಸವನ್ನು ಕ್ಯಾಮರಾ ಮುಂದೆ ತೆಗೆದು ಕೆಳಗೆ ಹಾಕಿ ದೀಪಿಕಾರ ಹಣೆಗೆ ಮುತ್ತುನ್ನು ನೀಡಿ ಸುದ್ದಿಯಾಗಿದ್ದರು, ಹಾಗೂ ಅವರಿಬ್ಬರ ಈ ಫೋಟೋಗಳು ಹಾಗೂ ವೀಡಿಯೋ ಸಹ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸದ್ಯ ರಣ್ವೀರ್ ’83’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಕೂಡ ‘ಚಪಾಕ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.