ಸ್ಯಾಂಡಲ್​ವುಡ್​​ ನಟನಿಂದ ಯುವತಿ ಮೇಲೆ ಅತ್ಯಾಚಾರ- ಬಸವನಗುಡಿ ಪೊಲೀಸರ ಮೊರೆ ಹೋದ ಯುವತಿ

ಸ್ಯಾಂಡಲ್​ವುಡ್​​ನ ಯುವನಟವೊಬ್ಬರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ನೊಂದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಇತ್ತೀಚೆಗೆ ತೆರೆ ಕಂಡ ಹೊಂಬಣ್ಣ ಚಿತ್ರದ ನಾಯಕ ಸುಬ್ರಹ್ಮಣ್ಯ ಎಂಬಾತನ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ನೊಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸಂತ್ರಸ್ತ ಯುವತಿ ಹಾಗೂ ನಟ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಈ ವೇಳೆ ನಟ ಸುಬ್ರಹ್ಮಣ್ಯ ಆಕೆಯನ್ನು ಪಾರ್ಟಿ ನೆಪದಲ್ಲಿ ಮನೆಗೆ ಕರೆಸಿಕೊಂಡು ಜ್ಯೂಸ್​ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ನೊಂದ ಯುವತಿ ಆತನ ಬಳಿ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಆದರೇ ಆತ ನಿರಾಕರಿಸಿದ್ದಾನೆ.

 

ಇದರಿಂದ ಮನನೊಂದ ಯುವತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾಳೆ. ಇನ್ನು ತನ್ನ ಮೇಲೆ ಸ್ನೇಹಿತೆಯೇ ಅತ್ಯಾಚಾರದ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುಬ್ರಹ್ಮಣ್ಯ ಎಸ್ಕೇಪ್​​ಆಗಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವನಾದ ಸುಬ್ರಹ್ಮಣ್ಯ ಹೊಂಬಣ್ಣ ಚಿತ್ರದಲ್ಲಿ ನಾಯಕನಟನಾಗಿ ನಟಿಸಿದ್ದು, ಹಲವು ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಸ್ಯಾಂಡಲವುಡ್​ ನಟನೊಬ್ಬ ಯುವತಿ ದೌರ್ಜನ್ಯದ ವಿಚಾರಕ್ಕೆ ಸುದ್ದಿಯಾದಂತಾಗಿದೆ.