ರಶ್ಮಿಕಾ ಪ್ಲೀಸ್ ಪ್ಲೀಸ್ ಒಂದೇ ಒಂದು ರಿಪ್ಲೇ ಕೊಡು! ಹಿಂದೆ ಬಿದ್ದ ಅಭಿಮಾನಿ! ರಶ್ಮಿಕಾ ರಿಪ್ಲೈ ಏನುಗೊತ್ತಾ?!

ಕಿರಿಕ್ ಪಾರ್ಟಿ ಚಿತ್ರದ ಮೂಲಕ  ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ಸಾನ್ವಿ ರಶ್ಮಿಕಾ ಮಂದಣ್ಣ, ಕನ್ನಡ ಹುಡುಗರ ನಿದ್ದೆ ಗೆಡಿಸಿದ ‘ಕರ್ನಾಟಕದ ಕ್ರಶ್’ ಕನ್ನಡ ಮತ್ತು ತೆಲುಗಿನಲ್ಲಿ ಮೋಡಿ ಮಾಡುತ್ತಿರುವ ರಶ್ಮಿಕಾಗೆ ತಮಿಳಿನಲ್ಲೂ ಅಭಿಮಾನಿಗಳಿದ್ದಾರೆ. ಇಲ್ಲಿಯವರೆಗೂ ಯಾವುದೇ ತಮಿಳು ಚಿತ್ರದಲ್ಲಿ ನಟಿಸಿಲ್ಲ. ಆದರೂ ತಮಿಳು ಅಭಿಮಾನಿಯೊಬ್ಬ ರಶ್ಮಿಕಾ ಮಂದಣ್ಣ ಅವರ ಬೆನ್ನು ಬಿದ್ದಿದ್ದಾನೆ. ಒಂದೇ ಒಂದು ರಿಪ್ಲೇ ಕೊಡಿ ಎಂದು ಗೋಗರಿಯುತ್ತಿದ್ದಾನೆ.

ad

ಕಳೆದ ಹದಿನೈದು ದಿನದಿಂದ ಟ್ವಿಟ್ಟರ್ ನಲ್ಲಿ ರಶ್ಮಿಕಾ, ರಶ್ಮಿಕಾ, ರಶ್ಮಿಕಾ ಎಂದು ಕಾದು ಕುತಿದ್ದಾನೆ. ಇನ್ನು ವಿಶೇಷ ಅಂದ್ರೆ ಕನ್ನಡದ ಕುವರಿಗಾಗಿ ಆ ಅಭಿಮಾನಿ ಕನ್ನಡವನ್ನೂ ಕಲಿಯುತ್ತಿದ್ದಾನಂತೆ.

 

ಅನಿಶ್ ಎಂಬ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವ ಯುವಕ ಮೂಲತಃ ತಮಿಳಿಗ ಎನ್ನುವುದು ವಿಶೇಷ. ತಮಿಳು ನಟ ಸೂರ್ಯ ಅವರ ಫೋಟೋವನ್ನ ಪ್ರೊಫೈಲ್ ಫೋಟೋ ಆಗಿ ಹಾಕಿಕೊಂಡಿರುವ ಈ ಯುವಕನಿಗೆ ರಶ್ಮಿಕಾ ಅಂದ್ರೆ ತುಂಬಾ ಇಷ್ಟವಂತೆ. ರಶ್ಮಿಕಾ ಅವರೇ ಒಂದು ರಿಪ್ಲೇ ಕೊಡಿ ಎಂದು ಕಾದು ಕುಳಿತಿದ್ದಾನೆ.

ಡಿಯರ್ ರಶ್ಮಿಕಾ ನಾನು ನಿನಗಾಗಿ ಹೇಗೆ ಕಾಯುತ್ತಿದ್ದೇನೆ ನೋಡು ಎಂದು ಟ್ರೋಲ್ ಮಾಡಿದ್ದಾನೆ.ನೀನು ಬರೋವರೆಗೂ ಕಾಯುತ್ತಲೇ ಇರ್ತಿನಿ ಎಂದು ಹೇಳುವಂತೆ ಮಿಸ್ಟರ್ ಬೀನ್ ಅವರ ಫೋಟೋ ಬಳಸಿ ಮನವಿ ಮಾಡಿದ್ದಾನೆ.

ಕಳೆದ ಮೂರು ದಿನದಿಂದ ನಾನು ಕನ್ನಡ ಕಲಿಯುತ್ತಿದ್ದೇನೆ. ಕೇವಲ ನೀನಗಾಗಿ, ನೀನಗಾಗಿ ಮಾತ್ರ’ ಎಂದು ಹೇಳಿರುವ ಆ ಅಭಿಮಾನಿ ಕನ್ನಡದಲ್ಲೇ ಟೈಪ್ ಮಾಡಿ ಟ್ವೀಟ್ ಮಾಡಿದ್ದಾನೆ.’ನನ್ನ ಪ್ರೀತಿಯ ಸಹೋದರಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ.’ ಎಂದು ಕೇಳಿಕೊಳ್ಳುತ್ತಿದ್ದಾನೆ.

ಆದರೆ ರಶ್ಮಿಕಾ ಮಂದಣ್ಣ ಮಾತ್ರ ಇದ್ಯಾವುದಕ್ಕು ಸೊಪ್ಪೆ ಹಾಕ್ತಿಲ್ಲವಂತೆ. ಸಿನಿಮಾ ನಟಿಯರಿಗೆ ಇಂಥ ಅಭಿಮಾನಿಗಳಿಗೇನೂ ಕೊರತೆಯಿರಲ್ಲ. ಆದರೆ ನಾನು ನಿನ್ನನ್ನೇ ಪ್ರೀತಿಸುತ್ತಿನಿ ಅಂತ ಹಿಂದೆ ಬೀಳೋರ ಸಂಖ್ಯೆಯೇ ಜಾಸ್ತಿ ಇರೋ ಕಾಲದಲ್ಲಿ ಈ ಅಭಿಮಾನಿ ಸಹೋದರಿ ಅಂತ ಕರಿತೀರೋದು ಮಾತ್ರ ವಿಭಿನ್ನವಾಗಿದೆ.