ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಬಂಧನ.. ಕಾರಣ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತೀರಿ.. !!

 ತನ್ನ ಸಹೋದ್ಯೋಗಿಯ ಹತ್ಯೆಗೆ ಸುಫಾರಿ ನೀಡಿದ ಆರೋಪದ ಮೇರೆಗೆ ಖ್ಯಾತ ಪತ್ರಕರ್ತ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರವಿ ಬೆಳಗೆರೆ ಸಹೋದ್ಯೋಗಿಯಾಗಿದ್ದ ಸುನೀಲ್​ ಹೆಗ್ಗರವಳ್ಳಿ ಹತ್ಯೆಗೆ ರವಿ ಬೆಳಗೆರೆ ಭೀಮಾತೀರದ ಹಂತಕರಿಗೆ ಸುಫಾರಿ ಕೊಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರವಿ ಬೆಳಗೆರೆಯನ್ನು ಬಂಧಿಸಿದ್ದು, ಈಗ ವಿಚಾರಣೆಗೊಳಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ತಂಡ ಶಾರ್ಪ್​ ಶೂಟರ್​ನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಸುಫಾರಿ ಸಂಗತಿ ಬೆಳಕಿಗೆ ಬಂದಿದೆ. ವೈಯಕ್ತಿಕ ಕಾರಣಕ್ಕೆ ರವಿ ಬೆಳಗೆರೆ ಭೀಮಾತೀರದ ಹಂತಕರಿಗೆ ಸುನೀಲ್ ಹತ್ಯೆಗೆ ಸುಫಾರಿ ನೀಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದ ಚಡಚಣದ ಶಾರ್ಪ್​ ಶೂಟರ್​​ ಶಶಿಮುಂಡೇವಾಡಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

 

 


ಸುನೀಲ್ ಹೆಗ್ಗರವಳ್ಳಿ ರವಿ ಬೆಳಗರೆ ಎರಡನೇ ಪತ್ನಿ ಯಶೋಮತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಬೇಸತ್ತಿದ್ದರು ಎನ್ನಲಾಗಿದೆ. ಹೀಗಾಗಿ ಭೀಮಾತೀರದ ಹಂತಕರಿಗೆ 30 ಲಕ್ಷ ರೂಪಾಯಿಗೆ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಫಾರಿ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಇದೀಗ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಕಳೆದ ಅಗಸ್ಟ್​ನಲ್ಲಿಯೇ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಫಾರಿ ಹಂತಕರು ಯತ್ನಿಸಿದ್ದರು. ವಸಂತಪುರದಲ್ಲಿರುವ ಸುನೀಲ್ ಹೆಗ್ಗರವಳ್ಳಿ ಅಪಾರ್ಟಮೆಂಟ್​​ ಗೆ ತೆರಳಿದ್ದ ಹಂತಕರು ಅಲ್ಲಿ ಸಿಸಿಟಿವಿ ಇದ್ದಿದ್ದನ್ನು ನೋಡಿ ವಾಪಸ್ಸಾಗಿದ್ದರು ಎನ್ನಲಾಗಿದೆ.


ಇನ್ನು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಈ ಸಂಪೂರ್ಣ ಪ್ರಕರಣದ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದು, ನನಗೆ ಘಟನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನೀನು ಒಳ್ಳೆಯ ಬರಹಗಾರ ನನ್ನ ಪತ್ರಿಕೆಯನ್ನು ನೋಡಿಕೋ ಎಂದಿದ್ದರು. ಆದರೇ ಈ ವಿಚಾರ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ರವಿ ಬೆಳಗೆರೆ ಬಂಧನ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದು, ಪ್ರಕರಣ ಇನ್ನೆಷ್ಟು ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

3 ಕಾಮೆಂಟ್ಗಳನ್ನು

  1. Unnecessarily Visual media made ravi belegare as great reporter. Early days no private visual media was there, so many reporters reported crime stories, that mean ravi belegare is a not great leader or personality. As per the my knowledge he is one of an ordinary reporter with 3rd-grade mentality. If so great reporter, he would have printed society betterment articles instead of crimes, rapes and political news. a 3rd-grade reporter is criminal, he should be punished until death in jail. If politicians interviewed by reporters, they can’t become great reporter. Indians need to realize the fact and need to stop making great for every stupid tasks.

Comments are closed.