ನನಗೆ ಇಷ್ಟು ಸಿಗರೇಟ್ ಸಾಕಾಗಲ್ಲ – ಕೇಳಿ ಕಸಿವಿಸಿಗೊಂಡ ಸಿಸಿಬಿ ಅಧಿಕಾರಿಗಳು

Supari Case: CCB Police Enquiring the Ravi Belgere.
Supari Case: CCB Police Enquiring the Ravi Belgere.

ನಾಲ್ಕು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ರವಿ- ಹೇಗೆ ಸಾಗುತ್ತಿದೆ ಗೊತ್ತಾ ವಿಚಾರಣೆ

ad


 

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಫಾರಿ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆಯನ್ನು ನಾಲ್ಕು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ. ನಿನ್ನೆ ಸಿಸಿಬಿ ಕಚೇರಿಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಗ ಕರೆದೊಯ್ದ ಪೊಲೀಸರು ಬಳಿಕ ಕೋರಮಂಗಲ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಿಸಿಬಿ ಪೊಲೀಸರ ಮನವಿ ಮನ್ನಿಸಿ ರವಿ ಬೆಳಗೆರೆಯನ್ನು ನಾಲ್ಕು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದ್ದರು.


ರಾತ್ರಿ ವಿಶ್ರಾಂತಿ ಬಳಿಕ ಬೆಳಗ್ಗೆ 9 ಗಂಟೆಯಿಂದ ಪತ್ರಕರ್ತ ರವಿಬೆಳಗೆರೆ ವಿಚಾರಣೆ ಆರಂಭವಾಗಿದೆ. ಇನ್ನು ಈಗಾಗಲೇ ಸುಫಾರಿ ಪ್ರಕರಣ ಎದುರಿಸುತ್ತಿರುವ ರವಿ ಬೆಳಗೆರೆ ಮನೆಯಲ್ಲಿ ಸಿಸಿಬಿ ಪೊಲೀಸ್ರು ಆಮೆ ಚಿಪ್ಪು ಹಾಗೂ ಜಿಂಕೆ ಚರ್ಮ ವಶಪಡಿಸಿಕೊಂಡಿರೋದರಿಂದ ಬೆಳಗೆರೆಗೆ ಮತ್ತಷ್ಟು ಸಂಕಷ್ಟಕ್ಕಿಡಾಗಿದ್ದಾರೆ.


ರವಿ ಮನೆಯಲ್ಲಿ ವಶಪಡಿಸಿಕೊಳ್ಳಲಾದ ಚರ್ಮ ಹಾಗೂ ಆಮೆಚಿಪ್ಪು ಬಗ್ಗೆ ತನಿಖೆ ಮಾಡಲು ಆರಣ್ಯ ಇಲಾಖೆಗೆ ಸಿಸಿಬಿ ಪೊಲೀಸ್ರು ಪತ್ರ ಬರೆದಿದ್ದಾರೆ. ಇದ್ರಿಂದಾಗಿ ಆರಣ್ಯ ಇಲಾಖೆ ರವಿ ಬೆಳಗೆರೆ ಮೇಲೆ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಅಲ್ಲದೆ ಬೆಳಗೆರೆ ಮನೆಯಲ್ಲಿ ಸಿಕ್ಕಿರುವ ಜಿಂಕೆ ಚರ್ಮದಲ್ಲಿ ಎರಡು ಗುಂಡೇಟಿನ ಗುರುತು ಪತ್ತೆಯಾಗಿದ್ದು ಬೆಳಗೆರೆಗೆ ಮತ್ತಷ್ಟು ಸಂಕಷ್ಟ ಹೆಚ್ಚು ಮಾಡಿದೆ. ಯಾಕಂದ್ರೆ ಗುಂಡೇಟು ಬಿದ್ದು ಬೇಟೇಯಾಡಿದ ರುಜುವಾದ್ರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ಜಾಮೀನು ರಹಿತ ಪ್ರಕರಣ ದಾಖಲಾಗಲಿದೆ. ಒಂದು ವೇಳೆ ಇದೇ ರೀತಿ ನಡೆದ್ರೆ ರವಿ ಬೆಳಗೆರೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗಿದೆ

 

ಸಿಗರೇಟ್ ಸಾಲದು ಎಸಿಪಿಗೆ ಆಗದು 

ಇನ್ನೂ ರವಿ ಬೆಳಗೆರೆಗೆ ಸಿಗರೇಟ್ ಕೊಡುವುದು ಸಿಸಿಬಿ ಅಧಿಕಾರಿಗಳಿಗೆ ಬಹಳ ಕಿರಿಕಿರಿ ಉಂಟು ಮಾಡುತ್ತಿದೆ. ಘಳಿಗೆಗೆ ಒಮ್ಮೆ ಸಿಗರೇಟ್ ಬೇಕು ಎಂದು ರವಿ ಬೆಳಗೆರೆ ಕೇಳುವುದ್ರಿಂದ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಅಲ್ಲದೆ ಪ್ರಕರಣದ ಅಧಿಕಾರಿಯಾಗಿರುವ ಎಸಿಪಿ ಸುಬ್ರಮಣಿ ಸಿಗರೇಟ್ ಸೇವನೆ ಮಾಡುವುದಿಲ್ಲ. ಆದ್ರೆ ಪದೇ ಪದೇ ಸಿಗರೇಟ್ ಬೇಕು ಎನ್ನುವುದರಿಂದ ತನಿಖೆಯೂ ಮಂದಗತಿಯಲ್ಲಿ ಸಾಗಿದೆ.
ಯಾವುದನ್ನು ಒಪ್ಪಿಕೊಳ್ಳದ ಬೆಳಗೆರೆ ಇನ್ನೂ ಪೊಲೀಸ್ರು ಯಾವುದೇ ಪ್ರಶ್ನೆಗೂ ನಾನು ಏನು ಮಾಡಿಲ್ಲ ಎಂದಷ್ಟೆ ಬೆಳಗೆರೆ ಹೇಳುತ್ತಿದ್ದಾರೆ. ಅಲ್ಲದೆ ನಾನು ಹೆಗ್ಗರವಳ್ಳಿಯ ಎಲ್ಲ ತಪ್ಪುಗಳನ್ನು ಕ್ಷಮಿಸಿ ಯಾವುದೋ ಕಾಲ ಆಗಿದೆ ಈಗ ನಾನೇಕೆ ಸುಪಾರಿ ಕೊಡಲಿ ಎಂದು ಅಧಿಕಾರಿಗಳಿಗೆ ಮರುಪ್ರಶ್ನೆ ಹಾಕಿದ್ದಾರೆ. ಉಳಿದಂತೆ ಬೆಳಗೆರೆ  ಆರೋಗ್ಯ ಸ್ಥಿರವಾಗಿದ್ದು ಸಿಸಿಬಿ ಕಚೆರಿಯಲ್ಲೇ ತನಿಖೆ ಮುಂದುವರೆಯಲಿದ್ದು, ಮಧ್ಯಾಹ್ನದ ನಂತರ ರವಿ ಬೆಳಗೆರೆಯನ್ನು ಮಹಜರಿಗಾಗಿ ಕರೆದೊಯ್ಯುವ ಸಾಧ್ಯತೆ ಇದೆ.1 ಕಾಮೆಂಟ್

  1. […] ರವಿ ಬೆಳಗೆರೆ ಬಂಧನಕ್ಕೊಳಗಾದ ಸುದ್ದಿ ಹೊರಬರುತ್ತಿದ್ದಂತೆ ಧಾರವಾಡದಲ್ಲಿದ್ದ ಭಾವನಾ ಬೆಳಗೆರೆಯವರನ್ನು ಬಿಟಿವಿ ಸಂಪರ್ಕಿಸಿತ್ತು. ಈ ವೇಳೆ ವಿವರವಾಗಿ ತಂದೆ ಬಗ್ಗೆ ಮಾತನಾಡಿದ ಭಾವನಾ, ನಮ್ಮ ತಂದೆ ನಿರಪರಾಧಿ, ಕೊಲೆಗಡುಕರಿಗೆ ಕೊಲೆ ಮಾಡಬೇಡಿ ಎಂದು ಹೇಳಿಕೊಟ್ಟವರು. ಆತ್ಮಹತ್ಯೆ ಮಾಡಿಕೊಂಡವರಿಗೆ ಮಾಡಿಕೊಳ್ಳಬೇಡಿ ಎಂದವರು. ಅವರು ಏಕಾಏಕಿ 15 ವರ್ಷದಿಂದ ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. […]

Comments are closed.