ಉಡುಪಿ ಮಠಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಭೇಟಿ.. ಏನಾಯ್ತು ಮಾತುಕತೆ?

ಆರ್ಟ್ ಆಫ್ ಲೀವಿಂಗ್​ ರವಿಶಂಕರ ಗುರೂಜಿ ಇಂದು ಕೃಷ್ಣಮಠಕ್ಕೆ ಬೇಟಿ ನೀಡಿದ್ರು. ಧರ್ಮ ಸಂಸತ್ತಿಗೆ ತಪ್ಪಿಸಿಕೊಂಡಿದ್ದ ಗುರೂಜಿವರು  ರಾಮಮಂದಿರ ನಿರ್ಮಾಣದ ಬಗ್ಗೆ ಪೇಜಾವರ ಶ್ರೀ ಜೊತೆ  ಅರ್ಧತಾಸು ಮಾತುಕತೆ ನಡೆಸಿದರು.

ad

 

ರಾಮಮಂದಿರ ವಿಚಾರದಲ್ಲಿ ಸೌಹಾರ್ಧತೆಗೆ ಪ್ರಯತ್ನ ಮುಂದುವರಿಸಬೇಕು.  ರಾಮಮಂದಿರ ವಿಚಾರವನ್ನು ಕೋರ್ಟ್​ ಹೊರಗೆ ಬಗೆಹರಿಸಲು ಯತ್ನಿಸಬೇಕು, ನಾನು ಭೇಟಿಯಾದವರೆಲ್ಲಾ ರಾಮಮಂದಿರದ ಪರವಾಗಿದ್ದಾರೆ. ಮುಸ್ಲಿಂರೂ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನೂ  ಆರ್​ಎಸ್​ಎಸ್​ ತಮ್ಮದೇ ಅಭಿಪ್ರಾಯ ಹೊಂದಲು ಸ್ವತಂತ್ರರು ರಾಮ ಮಂದಿರ ವಿಚಾರದಲ್ಲಿ ಎಲ್ಲರೂ ಸೌಹಾರ್ದತೆ ವಹಿಸಬೇಕು ಎಂದು ರವಿಶಂಕರ್​ ಗೂರೂಜಿ ಕೃಷ್ಣ ಮಠದಲ್ಲಿ ಹೇಳಿದರು. ಅಂತೂ ರಾಮಮಂದಿರ ದಿನಕ್ಕೊಂದು ಬೆಳವಣಿಗೆಗೆ ಸಾಕ್ಷಿಯಾಗ್ತಿದೆ.