28% GST ಕೊಟ್ಟು ಬೇಸತ್ತಿದ್ದೀರಾ? ಇಲ್ಲಿದೆ ನಿಮಗೆ ಸಂತೋಷದ ಸುದ್ದಿ !!!

 

 

ಜಿಎಸ್​ಟಿಗೆ ಕಂಗಾಲಾಗಿದ್ದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗಿನ ರಿಲೀಫ್ ಸಿಕ್ಕಿದೆ. ಹೌದು ಜಿಎಸ್​​​ಟಿ ಸಮಿತಿ ಮಹತ್ವದ ತೀರ್ಮಾನಕೈಗೊಂಡಿದ್ದು, 177 ವಸ್ತುಗಳಿಗೆ ಜಿಎಸ್​​ಟಿ ತೆರಿಗೆ ಕಡಿತಗೊಳಿಸಲಾಗಿದೆ. ಗುವಾಹಟಿಯಲ್ಲಿ ಹಣಕಾಸು ಸಚಿವ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್​ಟಿ ಸಮಿತಿ ಸಭೆಯಲ್ಲಿ ನಿರ್ಧಾರಕೈಗೊಳ್ಳಲಾಗಿದೆ. 177 ವಸ್ತುಗಳ ಶೇ.28ರಷ್ಟು ತೆರಿಗೆ ಶೇ.18ಕ್ಕೆ ಇಳಿಸಲಾಗಿದೆ.

ಚೂಯಿಂಗ್​ ಗಮ್​, ಚಾಕಲೇಟ್​, ಡಿಯೋಡ್ರೆಂಟ್​, ವಾಷಿಂಗ್​ ಪೌಡರ್​, ಡಿಟರ್ಜೆಂಟ್​, ಮಾರ್ಬಲ್​,ಶಾಂಪೂ, ಟೂತ್​ಪೇಸ್ಟ್​ , ಪೌಷ್ಟಿಕಾಂಶಯುಕ್ತ ಪಾನೀಯಗಳ ಮೇಲಿನ ತೆರಿಗೆ ಇಳಿಸಲಾಗಿದೆ. ಇನ್ನು 227 ವಸ್ತುಗಳಲ್ಲಿ ಕೇವಲ 50 ವಸ್ತುಗಳು ಮಾತ್ರ ಶೇ.28ರ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದೆ. ಇನ್ನು ಜಿಎಸ್​​ಟಿ ಕೌನ್ಸಿಲ್ ಐಷಾರಾಮಿ ವಸ್ತುಗಳನ್ನು ಶೇಕಡಾ 28 ದರದಲ್ಲೇ ಉಳಿಸಿಕೊಂಡಿದೆ.