ಸ್ವಾಮೀಜಿ ಚಿಲ್ಲರೆ ಬುದ್ದಿ ಬಿಡದೇ ಇದ್ದರೆ ನಾನ್ಯಾರೆಂದು ತೋರಿಸಬೇಕಾಗುತ್ತದೆ : ತಾಳಿಗೆ ಕೈ ಹಾಕಿದ ಸ್ವಾಮಿ ವಿರುದ್ದ ಸಚಿವ ಎಂ ಬಿ ಪಾಟೀಲ್ ಗರಂ

ಲಿಂಗಾಯತ ಪ್ರತ್ಯೇಕ ಧರ್ಮ ಪರ ವಿರೋಧ ಹೋರಾಟ ತಾರಕಕ್ಕೇರಿದೆ.

adಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎನ್ನುವ ಮಹಿಳೆಯರು ತಾಳಿ ಬಿಚ್ಚಿಡಬೇಕು ಎಂಬ ಶಿವಪ್ರಕಾಶ ಸ್ವಾಮೀಜಿ ಹೇಳಿಕೆಗೆ ಸಚಿವ ಎಂ ಬಿ ಪಾಟೀಲ್ ಆಕ್ರೋಶ ಭರಿತ ಪ್ರತಿಕ್ರಿಯೆ ನೀಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಎಂದು ಹೋರಾಟ ಮಾಡುವವರು ತಮ್ಮ ಮನೆಯವಮಹಿಳೆಯರ ತಾಳಿ, ಕಾಲುಂಗುರ ಕಳಚಿ, ಕುಂಕುಮ ಅಳಿಸಿ ಎಂದು ಶಿವಪ್ರಕಾಶ ಸ್ವಾಮಿಜಿ ಹೇಳಿದ್ದರು.

ಶಿವಪ್ರಕಾಶ ಸ್ವಾಮೀಜಿ ಹೇಳಿಕೆ ವಿವಾದಕ್ಕೆ ಎಡೆಮಾಡಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರ, ಸಚಿವ ಎಂ ಬಿ ಪಾಟೀಲ್ ” ತಾಳಿ ಕಳಚಿ, ಕುಂಕುಮ ಅಳಿಸಿ ಎಂದಿರುವ ಶಿವಪ್ರಕಾಶ ಸ್ವಾಮಿ ಒಬ್ಬ ತಲೆಕೆಟ್ಟವನು” ಎಂದಿದ್ದಾರೆ. ಸ್ವಾಮಿಜಿ ಚಿಲ್ರೆ ಕೆಲಸ ಬಿಡಬೇಕು. ಇಲ್ಲದಿದ್ದರೆ ಎಂ.ಬಿ. ಪಾಟೀಲ ಯಾರು ಅಂತಾ ತೋರಿಸಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ.