ಗಣೇಶ ಕೂರಿಸೋಕೆ ಬಿಬಿಎಂಪಿಗೆ ಬಾಡಿಗೆ ಕಟ್ಟಬೇಕಂತೆ- ಇದು ನಗರಾಡಳಿತದ ಹಿಂದೂ ವಿರೋಧಿ ನೀತಿ!

 

ಸಮ್ಮಿಶ್ರ ಸರ್ಕಾರದ ಹಿಂದೂ ವಿರೋಧಿ ಧೋರಣೆ ಮತ್ತೊಮ್ಮೆ ಬಹಿರಂಗವಾಗಿದೆ. ಹೌದು ಹಿಂದುಗಳ ಪಾಲಿಗೆ ದೊಡ್ಡ ಹಬ್ಬವಾಗಿರುವ ಗಣೇಶ್ ಹಬ್ಬದ ವೇಳೆಯೇ ಹಿಂದುಗಳಿಗೆ ಶಾಕ್ ನೀಡಲು ಬಿಬಿಎಂಪಿ ಸಜ್ಜಾಗಿದೆ. ಹೌದು ಇನ್ಮುಂದೆ ನಗರದಲ್ಲಿ ಎಲ್ಲೆಂದರಲ್ಲಿ ನೀವು ಗಣೇಶನನ್ನು ಸ್ಥಾಪಿಸುವಂತಿಲ್ಲ. ಹೌದು ಗಣೇಶ್​ನನ್ನು ಸ್ಥಾಪಿಸಲು ಕೂಡ ಬಿಬಿಎಂಪಿಗೆ ಬಾಡಿಗೆ ಕಟ್ಟಬೇಕಾದ ಸ್ಥಿತಿ ಎದುರಾಗಿದೆ. ಹೌದು ಗಣೇಶ್​ ಸ್ಥಾಪಿಸುವಂತ ಧಾರ್ಮಿಕ ಆಚರಣೆಯಲ್ಲೂ ದುಡ್ಡು ಮಾಡಲು ಬಿಬಿಎಂಪಿ ಮುಂಧಾಗಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ.
ಈಗಾಗಲೇ ಈ ಬಗ್ಗೆ ಬಿಬಿಎಂಪಿ ನಿಯಮ ಸಿದ್ಧಪಡಿಸಿದ್ದು, ಇವತ್ತು ನಡೆಯುವ ಕೌನ್ಸಿಲ್ ಸಭೆಯಲ್ಲಿ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಈ ನಿಯಮದ ಪ್ರಕಾರ ಯಾವುದಾದರೂ ಸ್ಥಳದಲ್ಲಿ ಗಣೇಶನನ್ನು ಪ್ರತಿಸ್ಥಾಪನೆ ಮಾಡೋದಾದರೇ ಅದಕ್ಕೂ ಮೊದಲು ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು. ಅಷ್ಟೇ ಅಲ್ಲ, ಗಣೇಶನನ್ನು ಸ್ಥಾಪಿಸುವ ಸ್ಥಳದಲ್ಲಿ ಚದರಅಡಿಗೆ ಇಷ್ಟರಂತೆ ಬಾಡಿಗೆ ದುಡ್ಡನ್ನು ಬಿಬಿಎಂಪಿಗೆ ಪಾವತಿಸಬೇಕು.

ಇಷ್ಟೇ ಅಲ್ಲ, ಗಣೇಶ್ ಮೂರ್ತಿ ಇರುವಷ್ಟು ದಿನ ಅಂದ್ರೇ, ಮೂರು ದಿನ, 7 ದಿನ,9 ದಿನ,12 ದಿನ ಹೇಗೆ ದಿನದ ಲೆಕ್ಕದಲ್ಲಿ ಬಾಡಿಗೆ ಕಟ್ಟಬೇಕು. ಒಂದೊಮ್ಮೆ ಬಿಬಿಎಂಪಿಯಿಂದ ಅನುಮತಿ ಪಡೆದು, ಬಾಡಿಗೆ ಕಟ್ಟದೇ ಇದ್ದಲ್ಲಿ, ಅಂತಹ ಸಾರ್ವಜನಿಕ ಗಣೇಶ್​ ಮೂರ್ತಿಯನ್ನು ಸೀಜ್​ ಮಾಡಲು ಕೂಡ ಬಿಬಿಎಂಪಿ ನಿರ್ಧರಿಸಿದೆ.
ಇನ್ನು ಬಿಬಿಎಂಪಿಯ ಈ ಹಿಂದೂ ವಿರೋಧಿ ನೀತಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ. ಇದು ತುಘಲಕ-ಮೊಘಲ ಅಳ್ವಿಕೆಯ ಕಾಲವಿರಬಹುದೆಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಕೌನ್ಸಿಲ್​ ಸಭೆಯಲ್ಲಿ ಚರ್ಚೆಯ ಬಳಿಕ ಈ ವಿಚಾರ ಅನುಮೋದನೆಗೊಳ್ಳಲಿದ್ದು, ಬಿಬಿಎಂಪಿಯಲ್ಲಿರುವ 100 ಬಿಜೆಪಿ ಕಾರ್ಪೋರೇಟರ್​ಗಳಿಂದ ಈ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾಗೋ ನೀರಿಕ್ಷೆ ಇದೆ. ಏನೇ ಆದರೂ ಬಿಬಿಎಂಪಿ ಗಣೇಶೋತ್ಸವಕ್ಕೂ ಅನುಮತಿ, ಬಾಡಿಗೆ ತೆಗೆದುಕೊಳ್ಳಲು ಮುಂಧಾಗಿದ್ದು, ಮಾತ್ರ ಹಿಂದೂ ವಿರೋಧಿ ನೀತಿ ಎಂಬುದರಲ್ಲಿ ಎರಡು ಮಾತಿಲ್ಲ ಅಂತಿದ್ದಾರೆ ಸಾರ್ವಜನಿಕರು.