ಪೊಲೀಸ್ ಇಲಾಖೆಯ ನಿರ್ಬಂಧದ ಮಧ್ಯೆಯೂ ಬಿಜೆಪಿ ಯುವ ಮೋರ್ಚಾ ಇಂದು ಮಂಗಳೂರು ಚಲೋ ನಡೆಸಲಿದೆ. ಈಗಾಗಲೇ ರಾಜ್ಯದ ಮೂಲೆಮೂಲೆಗಳಿಂದಲೂ ಕಮಲ ಕಾರ್ಯಕರ್ತರು ಗೌಪ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದು, ಕೆಲ ಕಾರ್ಯಕರ್ತರ ಮನೆಗಳಲ್ಲಿ ತಂಗಿದ್ಧಾರೆ ಎನ್ನಲಾಗ್ತಿದೆ. ಆದ್ರೆ, ಮಂಗಳೂರಿನಲ್ಲಿ ಱಲಿ ಹಾಗೂ ಮೆರವಣಿಗೆ ನಡೆಸದಂತೆ ಜಿಲ್ಲಾಡಳಿತ ಸದ್ಯ ನಿಷೇದಾಜ್ಞೆಯನ್ನ ಜಾರಿ ಮಾಡಿದೆ. ನೆಹರು ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಮಾತ್ರ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಆದ್ರೆ, ನಮಗೆ ಯಾರ ಅನುಮತಿಯ ಅಗತ್ಯವಿಲ್ಲ ಅಂದಿರೋ ಬಿಜೆಪಿ ಪಡೆ ನಗರದ ಜ್ಯೋತಿ ವೃತ್ತದಿಂದ ಬೈಕ್ ಱಲಿ ಜತೆ ಪಾದಯಾತ್ರೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕೋ ಎಚ್ಚರಿಕೆ ನೀಡಿದೆ.  ಈ ನಡುವೆ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಈಶ್ವರಪ್ಪ, ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಈಗಾಗಲೇ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಹೋರಾಟ ತೀವ್ರಗೊಳ್ಳೋ ಸಾಧ್ಯತೆಯಿದೆ. ಬೆಳಿಗ್ಗೆ ಹನ್ನೊಂದು ಘಂಟೆಗೆ ಪ್ರತಿಭಟನೆಗೆ ಚಾಲನೆ ದೊರೆಯಲಿದ್ದು, ಮುಂಜಾಗೃತ ಕ್ರಮವಾಗಿ ಸಾವಿರಾರು ಪೊಲೀಸರ ಸರ್ಪಗಾವಲನ್ನ ಇಡೀ ಜಿಲ್ಲೆಯಾದ್ಯಂತ ಹಾಕಲಾಗಿದೆ. ಅಲ್ದೆ, ಮದ್ಯದಂಗಡಿಗಳನ್ನ ಮುಚ್ಚೋಕು ಡಿಸಿ ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here