ಅಕ್ರಮ ಬಿಲ್ಡರ್ ಗಳ ವಿರುದ್ಧ ರೇರಾ ಅಸ್ತ್ರ. ಯಾರಿಗೆ ಸೇಫ್? ಯಾರಿಗೆ ರಿಸ್ಕ್? ಮನೆ ಖರೀದಿಗೂ ಮುನ್ನ ಎಚ್ಚರ!!

ಅಕ್ರಮ ಬಿಲ್ಡರ್​​​ಗಳ ವಿರುದ್ಧ ರೆರಾ ತನ್ನ ಮೊದಲ ಅಸ್ತ್ರ ಪ್ರಯೋಗಿಸಿದೆ. ವಿವಿಧ ಜಾಹೀರಾತುಗಳ ಮೂಲಕ ಜನರನ್ನ ಸೆಳೆಯುತ್ತಿರುವ. ಆದ್ರೆ, ಯಾವುದೇ ದಾಖಲೆಗಳನ್ನ ಹೊಂದಿರದ ರಿಯಲ್ ಎಸ್ಟೇಟ್ ಬಿಲ್ಡರ್ ಗಳ ಮಾಹಿತಿಯನ್ನ ರೆರಾ ತನ್ನ ವೆಬ್​​​ಸೈಟ್​​​​ನಲ್ಲಿ ಬಿಡುಗಡೆ ಮಾಡಿದೆ. ಅಕ್ಯುಪೆನ್ಸಿ ಸರ್ಟಿಫಿಕೇಟ್, ಕಂಪ್ಲೀಷನ್ ಸರ್ಟಿಫಿಕೇಟ್ ಸೇರಿ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆಯದೆ ನಿರ್ಮಿಸಿರುವ ಅಪಾರ್ಟ್​​​​ಮೆಂಟ್​​​​ಗಳು ಹಾಗೂ ವಿಲ್ಲಾಗಳ ಪಟ್ಟಿಯನ್ನ ರೆರಾ ಬಿಡುಗಡೆ ಮಾಡಿದೆ.

ಅಲ್ಲದೇ ಇಂತಹ ಅಪಾರ್ಟ್​​​ಮೆಂಟ್​​​​ಗಳನ್ನು ಖರೀದಿಸದಂತೆ ತನ್ನ ವೆಬ್​​​ಸೈಟ್​​​​ನಲ್ಲಿ ರೆರಾ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಇಂತಹ ಅಕ್ರಮ ಅಪಾರ್ಟ್​​​​ಮೆಂಟುಗಳು ರೆರಾದಡಿ ರಿಜಿಸ್ಟರ್ ಆಗಿಲ್ಲ. ಇಂತಹ ಅಪಾರ್ಟ್​​​ಮೆಂಟ್​​ಗಳನ್ನು ಖರೀದಿಸುವ ಮುನ್ನ ಎಚ್ಚರವಹಿಸುವಂತೆ ರೆರಾ ತನ್ನ ವೆಬ್​​​ಸೈಟ್​​​​​ನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೇ ಇಂತಹ ಅಪಾರ್ಟ್ ಮೆಂಟ್​​​​ಗಳನ್ನು ಖರೀದಿಸದಿಸುವ ಮುನ್ನ ಗ್ರಾಹಕರು ಎಚ್ಚರಿಕೆವಹಿಸಬೇಕು. ರೆರಾ ಅಡಿ ನೋಂದಣಿಯಾಗದೆ ಇಂತಹ ಕಂಪೆನಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನ ದಾಖಲಿಸೋ ಜೊತೆಗೆ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳೋದಾಗಿ ರೆರಾ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ.