ಧಾರ್ಮಿಕ ಕೇಂದ್ರಗಳಲ್ಲಿ ನಿರ್ಬಂಧ ಸರಿಯಲ್ಲ! ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧ ಪ್ರಶ್ನಿಸಿ ‘ಸುಪ್ರೀಂ ಮೆಟ್ಟಿಲೇರಿದ ದಂಪತಿ!!

ಮಹಿಳೆಯರಿಗೆ ಗೌರವ ನೀಡಬೇಕು ಎಂದು ಹೇಳುವ ಈ ಸಮಾಜ ಮಸೀದಿಗೆ ಹೋಗಬಾರದು ಎಂದು ಹೇಳುವುದು ಯಾವ ನ್ಯಾಯ. ಈ ರೀತಿಯ ಮಾತನ್ನು ಯಾವ ಸಮಾಜವು ಒಪ್ಪುವುದಿಲ್ಲ.  ಹೀಗಾಗಿ ಮಸೀದಿ ಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಹಾಗೂ ಮುಸ್ಲಿಂ ಮಹಿಳೆಯರಿಗೆ ಮಸೀದಿಯಲ್ಲಿ ಪ್ರವೇಶ ನಿಷೇಧವನ್ನು ಪ್ರಶ್ನಿಸಿ ಪುಣೆ ಮೂಲದ ದಂಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ad

ಮಸೀದಿ ಪ್ರವೇಶಕ್ಕೆ ಹೆಣ್ಣುಮಕ್ಕಳನ್ನು  ನಿಷೇಧಿಸುವುದು ಕಾನೂನು ಬಾಹಿರ ಮತ್ತು ಗೌರವಕ್ಕೆ ಚ್ಯುತಿ ತರುವ ಸಂಗತಿ ಎಂದು ಅರ್ಜಿಯಲ್ಲಿ ಹೇಳಿರುವ ದಂಪತಿ, ಧಾರ್ಮಿಕ ಸ್ಥಳದಲ್ಲಿ ಯಾವುದೇ ಲಿಂಗ ಭೇದ ಇರಬಾರದು. ಎಲ್ಲ ಕಡೆಯೂ ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು. ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾದಲ್ಲೇ ಈ ರೀತಿಯ ಲಿಂಗ ಭೇದವಿಲ್ಲ.ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾದಲ್ಲೇ ಈ ರೀತಿಯ ಲಿಂಗ ಭೇದವಿಲ್ಲ. ನಂಬಿಕೆ ಇರುವಂಥ ಪುರುಷರು, ಮಹಿಳೆಯರು ಕಾಬಾದಲ್ಲಿ ನಿಲ್ಲುತ್ತಾರೆ ಎಂದು ಪುಣೆ ಮೂಲದ ದಂಪತಿ ಯಾಸ್ಮಿನ್ ಜುಬೇರ್ ಅಹ್ಮದ್ ಹಾಗೂ ಜುಬೇರ್ ಅಹ್ಮದ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ಇಸ್ಲಾಮ್ ನ ಹಲವಾರು ಧಾರ್ಮಿಕ ಮುಖಂಡರನ್ನು ಭೇಟಿ ಆದ ನಂತರವೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. “ಜಾಮಾ ಮಸೀದಿ, ಬೋಪೋಡಿಯ ಇಮಾಮ್ ರು ಪತ್ರ ಬರೆದರೂ  ಈವರೆಗೆ ಅನುಮತಿ ನೀಡಿಲ್ಲ. ಅದ್ದರಿಂದ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅವಕಾಶ ಬೇರೆ ಎಲ್ಲೋ ಸಿಗಬಹುದೆಂಬ ಖಾತ್ರಿ ಇಲ್ಲ ಎಂದು ದಂಪತಿಗಳು ತಮ್ಮ ಅರ್ಜಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಇನ್ನು ಶಬರಿಮಲೆಯಲ್ಲಿ  ಎಲ್ಲ ವಯೋಮಾನದ ಸ್ತ್ರೀಯರಿಗೂ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ನಾವು ಸ್ಮರಿಸಬಹುದಾಗಿದೆ. ಇನ್ನು  ಈ ಅರ್ಜಿಯನ್ನು  ಸುಪ್ರೀಂ ಕೋರ್ಟ್​  ಪುರಸ್ಕರಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.