ನಗರಕ್ಕೆ ಖರ್ತನಾಕ ಭವಾರಿಯ ಗ್ಯಾಂಗ್ ಎಂಟ್ರಿ

ಕಳೆದ ಕೆಲ ತಿಂಗಳ ಹಿಂದೆ ಸಿಲಿಕಾನ ಸಿಟಿ ಜನರು ಮತ್ತು ಪೊಲೀಸರ ನಿದ್ದೆಗೆಡಿಸಿದ್ದ ಸರಗಳ್ಳತನ ಪ್ರಕರಣಗಳು ಮತ್ತೆ ಮರುಕಳಿಸುತ್ತಿವೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮತ್ತೆ 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ವರದಿಯಾಗಿದೆ. ಉದ್ಯಾನನಗರಿಗೆ ಖರ್ತನಾಕ್ ಭವಾರಿಯಾ ಗ್ಯಾಂಗ್​ ಎಂಟ್ರಿ ಕೊಟ್ಟಿದೆ ಎನ್ನಲಾಗಿದ್ದು, ಖಾಕಿ ಪಡೆ ಕಂಗಾಲಾಗಿದೆ.

ಈ ಹಿಂದೆ ಕೂಡ ಖರ್ತನಾಕ ಭವಾರಿಯಾ ಗ್ಯಾಂಗ್​ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿತ್ತು. ಆದರೆ ಬಿಗಿಭದ್ರತೆ ಕೈಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಭವಾರಿಯಾ ಗ್ಯಾಂಗ್​ ಬೆಂಗಳೂರಿಗೆ ಎಂಟ್ರಿ ಕೊಟ್ಟಿರಲಿಲ್ಲ. ಆದರೇ ಇದೀಗ ಮತ್ತೆ ಭವಾರಿಯಾ ಗ್ಯಾಂಗ್ ಭೇಟಿ ಕೊಟ್ಟಿದೆ. ಇದುವರೆಗೂ ಭವಾರಿಯಾ ಗ್ಯಾಂಗ್​ ಬೆಂಗಳೂರಿಗೆ ಎಂಟ್ರಿ ಕೊಟ್ಟ ತಕ್ಷಣ ಪೊಲೀಸ್ ಇಲಾಖೆಗೆ ಮೂಲವೊಂದರಿಂದ ಮಾಹಿತಿ ಲಭ್ಯವಾಗುತಿತ್ತು. ಪೊಲೀಸರು ಶಂಕಿತ ಸರಗಳ್ಳನ ಪೋಟೋ ಕಳಿಸುತ್ತಿದ್ದಂತೆ ಜೋರೋ ಎಂಬ ಮಾಹಿತಿದಾರನೊಬ್ಬ ಪೊಲೀಸರಿಗೆ ಸಂಪೂರ್ಣ ವಿವರ ಒದಗಿಸುತ್ತಿದ್ದ. ಹೀಗಾಗಿ ನಗರದಲ್ಲಿ ಸರಗಳ್ಳತಕ್ಕಿಳಿಯುತ್ತಿದ್ದ ಭವಾರಿಯಾ ಗ್ಯಾಂಗ್​​ ಸದಸ್ಯರನ್ನು ಹೆಡೆಮುರಿ ಕಟ್ಟುತ್ತಿದ್ದರು.

ಆದರೇ ಹೀಗೆ ಪೊಲೀಸರಿಗೆ ಭವಾರಿಯಾ ಗ್ಯಾಂಗ್​ ಬಗ್ಗೆ ಮಾಹಿತಿ ಕೊಡ್ತಿದ್ದ ಜೋರೋನನ್ನೇ ಭವಾರಿಯಾ ಗ್ಯಾಂಗ್ ಸದಸ್ಯರು ಮೂರು ತಿಂಗಳ ಹಿಂದೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹೀಗಾಗಿ ಇದೀಗ ಪೊಲೀಸರಿಗೆ ಈ ಖರ್ತನಾಕ ಗ್ಯಾಂಗ್​ ವಿರುದ್ಧ ಕಾರ್ಯಾಚರಣೆ ಕಷ್ಟವಾಗಿದ್ದು, ಸರಗಳ್ಳತನ ಹೆಚ್ಚಲಾರಂಭಿಸಿದೆ. ಭವಾರಿಯಾ ಗ್ಯಾಂಗ್​​ ಅತ್ಯಂತ ಖರ್ತನಾಕ ಕಳ್ಳರ ಗುಂಪಾಗಿದ್ದು, ಬೆಂಗಳೂರು ಪೊಲೀಸರ ಪಾಲಿಗೆ ಸಂಕಷ್ಟ ತಂದಿಟ್ಟಿದೆ. ಇನ್ನಷ್ಟು ಸರಗಳ್ಳತನಗಳು ನಡೆಯುವ ಮುನ್ನ ನಗರದ ಖಾಕಿ ಪಡೆ ಎಚ್ಚೆತ್ತುಕೊಂಡು ಭವಾರಿಯ ಅಟ್ಟಹಾಸಕ್ಕೆ ಅಂತ್ಯ ಹಾಡಬೇಕಿದೆ.

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here