ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ: ನಟೋರಿಯಸ್ ಅಂದರ್. Exclusive News

 

ಹುಬ್ಬಳ್ಳಿ: ಆತ ಮನೆಗಳಿಗೆ ನುಗ್ಗುವ ಮುನ್ನ ವಾರಗಟ್ಟಲೇ ವಾಚ್ ಮಾಡುತ್ತಿದ್ದ. ಒಬ್ಬರೇ ಇರುವ ಮಹಿಳೆಯರೇ ಈತನ ಟಾರ್ಗೆಟ್ ಆಗಿರುತ್ತಿದ್ದರು. ಎಲ್ಲವೂ ಗುರುತು ಹಾಕಿಕೊಂಡ ನಂತರ ಆತ ಏನು ಮಾಡುತ್ತಿದ್ದ ಗೊತ್ತೆ.. ಈ ವರದಿ ನೋಡಿಮೊದ್ಲು ಈತನ ಹೆಸರು ತಿಳಿದುಕೊಂಡು ಬಿಡಿ. ಸೊಲ್ಲಾಪುರದ ಸುರೇಶ ಯಲ್ಲಪ್ಪ ಶಿವಫುರೆ. ಈತನ ಕೆಲಸ ದರೋಡೆ ಮಾಡುವುದು. ಅದೇ ಕಾರಣಕ್ಕೆ ಸೊಲ್ಲಾಪುರದಿಂದ ಗಡಿಪಾರಿಗೆ ಒಳಗಾಗಿದ್ದಾನೆ. ಹಾಗಾಗಿಯೇ ಆತ ಆಯ್ದುಕೊಂಡಿದ್ದು ಉತ್ತರಕರ್ನಾಟಕದ ಚೋಟಾ ಮುಂಬೈಯನ್ನ. ಇಲ್ಲಿ ತನ್ನ ಕೈ ಚಳಕ ತೋರಿಸಲು ಆರಂಭಿಸಿದ ಸುರೇಶ, ಬರೋಬ್ಬರಿ ಐದು ಮನೆಗೆ ಕನ್ನ ಹಾಕಿದ. ಅದರಲ್ಲಿ ಮೂರು ಮನೆಗಳಿಂದ 45 ಗ್ರಾಂ ಚಿನ್ನ ಎಗಿರಿಸಿದ್ದ. ಮನೆಯಲ್ಲಿದ್ದ ಮಹಿಳೆಯರಿಗೆ ಹಿಗ್ಗಾಮುಗ್ಗಾ ಹೊಡೆದು ದರೋಡೆ ಮಾಡಿದ್ದ. ಇದೇ ಥರದ ಪ್ರಕರಣಗಳು ಗದಗ, ಬೀದರ, ಕಲಬುರಗಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆದಿವೆ. ಇಲ್ಲೆಲ್ಲಾ ನಡೆದಿರುವ ಪ್ರಕರಣಗಳಿಗೆ ಸುರೇಶನ ಎಣ್ಣೆಯೇ ಕಾರಣ.ಮನೆಗಳಿಗೆ ನುಗ್ಗುವ ಮುನ್ನ ಸುರೇಶ, ತನ್ನೇಲ್ಲ ಬಟ್ಟೆಗಳನ್ನು ತೆಗೆಯುತ್ತಿದ್ದ. ನಂತರ ಮೈಗೆ ಹರಳೆಣ್ಣೆ ಹಚ್ಚಿಕೊಂಡು ಹೋಗುತ್ತಿದ್ದ. ಅದಕ್ಕೆ ಕಾರಣ ಅಂದ್ರೇ, ಒಂದು ಸಿಕ್ಕೊಂಡ್ರೇ ಜಾರಿಕೊಳ್ಳಬೇಕು, ಇಲ್ಲದಿದ್ರೇ ಬಡಿತ ಬಿದ್ರೇ ನೋವಿಗೆ ಅದೇ ಎಣ್ಣೆ ಉಪಶಮನವಾಗಬೇಕು ಎಂಬ ಲೆಕ್ಕಾಚಾರ ಸುರೇಶನದ್ದು.

ಹೇಗೆ ಹಿಡಿದ್ರು

ಈತನ ಉಪಟಳದಿಂದ ಸಾರ್ವಜನಿಕರಷ್ಟೇ ಅಲ್ಲ ಪೊಲೀಸರು ಹೌಹಾರಿದ್ರು. ಈತನಿಂದಲೇ ಇಬ್ಬರು ನೌಕರಿ ಕಳೆದುಕೊಂಡಿದ್ದರು. ಅದೇ ಕಾರಣಕ್ಕೆ ಬಲೆ ಬೀಸಿದ ಹುಬ್ಬಳ್ಳಿ ಧಾರವಾಡ ಪೊಲೀಸರು ಮಾರು ವೇಷದಲ್ಲಿ ಕಾರ್ಯಾಚರಣೆ ಆರಂಭಿಸಿ ಯಶಸ್ವಿಯಾಗಿದ್ದಾರೆ. ಜನರ ನೆಮ್ಮದಿಯ ಜೊತೆಗೆ ತಮ್ಮ ನೌಕರಿಯನ್ನೂ ಗಟ್ಟಿಯಾಗಿಸಿಕೊಂಡಿದ್ದಾರೆ.

ವರದಿ:  ಮೆಹಬೂಬ ಮುನವಳ್ಳಿ-ಹುಬ್ಬಳ್ಳಿ ಬ್ಯುರೋ ಹೆಡ್