ಬೊಮ್ಮನಹಳ್ಳಿ ಸತೀಶ್​ ರೆಡ್ಡಿ ಪರ ಕಣಕ್ಕಿಳಿದ ರಾಕಿಂಗ್ ಸ್ಟಾರ್ ಯಶ್​!

 

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ನಟರುಗಳ ಅಬ್ಬರದ ಪ್ರಚಾರ ಜೋರಾಗಿದ್ದು ಇಂದು ರಾಕಿಂಗ್ ಸ್ಟಾರ್ ಯಶ್ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಹೊಸೂರು ಮುಖ್ಯರಸ್ತೆಯ ಬೊಮ್ಮನಹಳ್ಳಿ ಜಂಕ್ಷನ್, ಹೊಸರೋಡ್ ಹಾಗೂ ಗಾರ್ಮೆಂಟ್ಸ್ ಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು.

 

ಈ ವೇಳೆ ಎಲ್ಲಿ ನೋಡಿದರು ನಟ ಯಶ್ ನೋಡಲು ಜನಸಾಗರವೆ ಹರಿದು ಬಂದಿದ್ದರಿಂದ‌ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ನಟ ಯಶ್ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿರವರು ಸ್ನೇಹ ಜೀವಿಯಾಗಿದ್ದು ಜನರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಅವರ ಪರ ಪ್ರಚಾರ ಮಾಡಲು ಒಪ್ಪಿಕೊಂಡು ಬಂದಿದ್ದೇನೆ.‌ ಸತೀಶ್ ರೆಡ್ಡಿ ಚುನಾವಣೆಯಲ್ಲಿ ಗೆದ್ದ ನಂತರ ಜನರ ಕೆಲಸ ಮಾಡದೆ ಇದ್ದ ಪಕ್ಷದಲ್ಲಿ ಜನರ ಪರ ನಿಂತು ಹೋರಾಟ ಮಾಡುವುದಾಗಿ ತಿಳಿಸಿದ್ರು. ಜನರು ಪಕ್ಷಾತೀತವಾಗಿ ವ್ಯಕ್ತಿಯನ್ನು ನೋಡಿ ಮತ ಹಾಕಿ ಎಂದ ಯಶ್, ಇಲ್ಲಿ ಯಾರು ಸಿದ್ಧಾಂತಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಅಂತ ಪಕ್ಷ ಬಿಟ್ಟು ಹೋಗ್ತಾರೆ. ಒಂದು ವೇಳೆ ಅತಂತ್ರ ವಿಧಾನಸಭಾ ರಚನೆಯಾದ್ರು ಕೆಲವು ಸ್ಕೀಮ್ ಬಳಸಿ ಉತ್ತಮ ಕಾರ್ಯ ಮಾಡಬೇಕು,‌ ನನಗೆ ಪಕ್ಷಗಳಿಗಿಂತ ವ್ಯಕ್ತಿಗಳು ಮುಖ್ಯ ಎಂದರು.