ರಾಕಿಂಗ್ ಸ್ಟಾರ್ ‘ಯಶ್’ ಹತ್ಯೆಗೆ ಸುಪಾರಿ…!!!

ಕನ್ನಡದ ಖ್ಯಾತ ನಟನೊಬ್ಬನ ಹತ್ಯೆಗೆ ಸುಪಾರಿ‌ಪಡೆದಿದ್ದ ಪ್ರಕರಣದಲ್ಲಿ ರೌಡಿಶೀಟರ್ ಸ್ಲಂ ಭರತನ ನಾಲ್ವರು ಶಿಷ್ಯರನ್ನ ಸಿಸಿಬಿ ಪೊಲೀಸ್ತು ಬಂಧಿಸಿದ್ದಾರೆ. ನಿತೇಶ್ ಮಧುಸೂಧನ ನಿತ್ಯಾನಂದ ಹಾಗೂ ಪೃಥ್ವಿ ಬಂಧಿತ ಆರೋಪಿಗಳು. ಶೆಷಾದ್ರಿಪುರಂ ಬಳಿ ಮಾರಾಕಾಸ್ತ್ರಗಳೊಂದಿಗೆ ಇದ್ದ ಆರೋಪಿಗಳನ್ನ ಸಿಸಿಬಿ ಪೊಲೀಸ್ರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ನಿತೇಶ್ ನಟನೊಬ್ಬನ ಹತ್ಯೆ ಮಾಡಲು ಜೈಲಿನಲ್ಲಿರುವ ಸ್ಲಂ ಭರತ ಹಾಗೂ ಶಫಿ ಎಂಬುವರು ಸೂಚಿಸಿದ್ದರು ಎನ್ನುವ ಮಾಹಿತಿಯನ್ನ ಬಾಯ್ಬಿಟ್ಟಿದ್ದಾನೆ.

ad

ಆ ನಟ ಯಶ್ ಎನ್ನುವ ಶಂಕೆ..?

ಕನ್ನಡದ ಆ ಖ್ಯಾತ ನಟ ಯಶ್ ಎನ್ನುವ ಮಾತುಗಳು ಸಿಸಿಬಿ ಪೊಲೀಸ್ ವಲಯದಲ್ಲಿ ಕೇಳಿ ಬರ್ತಾ ಇದೆ. ಈ ಹಿಂದೆ ಸ್ಲಂ ಭರತ ಬಂಧಿತನಾದಾಗಲೇ ಈ ವಿಚಾರ ಚಾಲ್ತಿಗೆ ಬಂದಿತ್ತು. ಆದರೆ ಅದಕ್ಕೆ ಪೂರಕವಾದ ಸಾಕ್ಷ್ಯಗಳು‌ಸಿಗದೆ ಇದ್ದ ಕಾರಣ ಆ ವಿಚಾರವನ್ನ ಸಿಸಿಬಿ ಪೊಲೀಸ್ರು ಅಲ್ಲಿಗೆ ಕೈ ಬಿಟ್ಟಿದ್ದರು. ಆದರೆ ಈಗ ಬಂಧಿಸಲಾಗಿರುವ ಆರೋಪಿಗಳು ಅದೇ ಹೇಳಿಕೆಗೆ ಪೂರಕವಾದ ಹೇಳಿಕೆಗಳನ್ನ ನೀಡಿರುವುದರಿಂದ ಈಗ ಪ್ರಕರಣಕ್ಕೆ ಮರು ಜೀವ ಬಂದಿದ್ದು ಪೊಲೀಸ್ರು ತನಿಖೆಯನ್ನ ತೀವ್ರಗೊಳಿಸಿದ್ದಾರೆ.

ಸೋಮವಾರ ಸ್ಲಂ ಭರತನನ್ನ ಕಸ್ಟಡಿಗೆ ಪಡೆಯಲು ಸಿದ್ದತೆ..!

ಯಾವಾಗ ಬಂಧಿತ ಆರೋಪಿಗಳು ಸ್ಲಂ ಭರತ ಹಾಗೂ ಶಫಿ ಹೇಳಿದ್ರು ಅಂತಾ ಹೇಳಿಕೆ ನೀಡಿದ್ರೂ ಇತ್ತ ಸಿಸಿಬಿ ಸಿಸಿಬಿ ಸ್ಲಂ ಭರತ ಹಾಗೂ ಶಫಿಯನ್ನ ವಶಕ್ಕೆ ಪಡೆಯಲು ಸಿದ್ದತೆ ನಡೆಸುತ್ತಿದ್ದಾರೆ. ಸೋಮವಾರ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸ್ರು ನ್ಯಾಯಾಲಯದಲ್ಲಿ‌ ಮನವಿ ಮಾಡಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಸ್ಲಂ ಭರತ ಹಾಗೂ ಶಫಿ ವಿಚಾರಣೆ ನಂತರವಷ್ಟೇ ಯಾರ ಹತ್ಯೆಗೆ ಸ್ಕೆಚ್ ಹಾಕಲು ಸಿದ್ದತೆ ಮಾಡಲಾಗಿತ್ತು. ಸುಫಾರಿ ಕೊಟ್ಟಿದ್ದು ಯಾರು ಎನ್ನುವ ಎಲ್ಲ ವಿಚಾರಗಳು ಹೊರ ಬರಬೇಕಿದೆ.

ಒಟ್ಟಿನಲ್ಲಿ ಸ್ಲಂ ಭರತ ಹಾಗೂ ಶಫಿ ವಿಚಾರಣೆ ನಂತರ ಸ್ಯಾಂಡಲವುಡ್ ಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ