ರೋಹಿತ್ ಶರ್ಮ ವಿಶ್ವದಾಖಲೆ – ಬೃಹತ್ ಮೊತ್ತ ಪೇರಿಸಿದ ಭಾರತ

ಶ್ರೀಲಂಕಾ ವಿರುಧ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ ಸಿಡಿದೆದ್ದಿದ್ದಾರೆ. ಅವರು 153 ಬಾಲ್ ಎದುರಿಸಿ 208 ರನ್ ಬಾರಿಸಿದ್ದಾರೆ. ಇದರಲ್ಲಿ 13 ಫೋರ್ ಹಾಗೂ 12 ಸಿಕ್ಸ್ ಒಳಗೊಂಡಿವೆ. ಇದರೊಂದಿಗೆ ಭಾರತ 50 ಓವರ್ ಗಳಲ್ಲಿ 392/4 ಬೃಹತ್ ಮೊತ್ತ ಕಲೆ ಹಾಕಿದೆ.

ಟಾಸ್ ಗೆದ್ದ ಶ್ರೀಲಂಗಾ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು.. ಮೊದಲ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತ ಭಾರತ ವ್ಯಾಪಕ ಟೀಕೆಗೆ ಒಳಗಾಗಿತ್ತು. ಇದಕ್ಕೆ ಸೇಡು ತೀರಿಸಿಕೊಂಡ ಕೊಹ್ಲಿಯ ಅನುಪಸ್ಥಿತಿಯಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮ ಶ್ರೀಲಂಕಾದ್ ಬೌಲರ್ಗಳ ಬೆವರಿಳಿಸಿದರು.

ರೋಹಿತ್ ಗೆ ಸಾಥಿಯಾಗಿ, ಶಿಖರ್ ಧವನ್ 68, ಶ್ರೇಯಸ್ ಐಯ್ಯರ್ 88, ಧೋನಿ 7, ಪಾಂಡ್ಯಾ 8 ರನ್ ಗಳಿಸಿದರು.

ಪ್ರತ್ಯುತ್ತರ ನೀಡಿ

Please enter your comment!
Please enter your name here