ಅಸಾವರಿ ಮೂಲಕ ರೋಶನಿ ಸ್ಯಾಂಡಲ್​ವುಡ್​ ಎಂಟ್ರಿ!

ಸ್ಯಾಂಡಲವುಡ್​​ನಲ್ಲಿ ಅಸಾವರಿ ಎಂಬ ಟೈಟಲ್​​ನಲ್ಲಿ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಇದು ಅಪ್ಪಟ ಮಹಿಳಾ ನಿರ್ದೇಶಕಿಯೊಬ್ಬರ ಚಿತ್ರ.

ad


ಚಿತ್ರರಂಗದಿಂದ ಸಂಪೂರ್ಣ ಭಿನ್ನವಾದ ಹಿನ್ನೆಲೆಯೊಂದರಿಂದ ಬಂದ ಸೌಂಡ್​ ಇಂಜನೀಯರ್ ಹಾಗೂ ಮಾಡೆಲ್​​ ರೋಶನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ರೋಶನಿಯವರ ಮೊದಲ ಪ್ರಯತ್ನವಾಗಿದ್ದು, ಅಸಾವರಿ ಎಂಬ ಸುಂದರ ಹಾಗೂ ಮನತಟ್ಟುವ ಹೆಸರಿನಲ್ಲಿ ಚಿತ್ರ ಮೂಡಿಬರಲಿದೆ. ಈಗಾಗಲೇ ರೆಬಲ್​ ಸ್ಟಾರ್ ಅಂಬರೀಶ್​ ಈ ಚಿತ್ರದ ಟೈಟಲ್​​ ರಿಲೀಸ್​ ಮಾಡಿದ್ದು, ಇದು ಸ್ಯಾಂಡಲ್​ವುಡ್​ ಸಾರಥಿ, ಚಾಲೆಂಜಿಂಗ್ ಸ್ಟಾರ್​ ಅರ್ಪಿಸುತ್ತಿರುವ ಚಿತ್ರ.

ದಿ ಬೀಟಲ್ಸ್​ ಪಿಚ್ಚರ್ಸ್​​ ಪ್ರೊಡಕ್ಷನ್​​ನಲ್ಲಿ ಈ ಅಸಾವರಿ ಚಿತ್ರ ತೆರೆ ಕಾಣಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಅಸಾವರಿ ಎಂಬುದು ಹಿಂದೂಸ್ಥಾನಿ ರಾಗವೊಂದರ ಹೆಸರು. ರೋಶನಿಯವರ ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಕತೆಹೊಂದಿದ ಚಿತ್ರವಂತೆ. ಆದರೇ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡೋಕೆ ನಿರಾಕರಿಸುವ ರೋಶನಿ, ಚಿತ್ರದ ಕತೆಯನ್ನು ತೆರೆಯ ಮೇಲೆ ನೋಡಿ ಆನಂದಿಸಿ ಅಂತಾರೆ.

ಅಂದ ಹಾಗೆ ಈ ಚಿತ್ರ ಸ್ವತಃ ರೋಶನಿಯವರ ಕತೆಯನ್ನು ಆಧರಿಸಿದ್ದು, ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕೆ ಹೊರಟಿರೋದರಿಂದ ವಿಭಿನ್ನವಾದ ಮನಃತಟ್ಟುವ ಕತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ ರೋಶನಿ. ಈಗಾಗಲೇ ಚಿತ್ರದ ಕಲಾವಿದರು ಸೇರಿದಂತೆ ತಂತ್ರಜ್ಞರ ಆಯ್ಕೆ ಆರಂಭವಾಗಿದ್ದು, ಚಿತ್ರತಂಡ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಹೊಂದಿದೆ. ಒಟ್ಟಿನಲ್ಲಿ ವಿಭಿನ್ನ ಕಥಾಮಾಲಿಕೆ ಹಾಗೂ ಸುಂದರ ಹಾಡುಗಳುಳ್ಳ ಚಿತ್ರವೊಂದು ಸ್ಯಾಂಡಲ್​ವುಡ್​​ನಲ್ಲಿ ಸದ್ದು ಮಾಡಲಿರೋದಂತು ಸತ್ಯ.