ಬಾಲ ಬಿಚ್ಚಿದ ರೌಡಿ ಗ್ಯಾಂಗ್..!! ನಡುರಸ್ತೆಯಲ್ಲಿ ಹಾಡುಹಗಲೆ ಮರ್ಡರ್

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿ ರೌಡಿಶೀಟರ್ ನೊಬ್ಬನನ್ನು ಹಾಡುಹಗಲೇ ಕೊಚ್ಚಿ ಕೊಲೆಮಾಡಲಾಗಿದೆ.  ರೌಡಿಗಳ ನಡುವೆ ಮಾರಾಮಾರಿ ನಡೆದಿದ್ದು, ನಟೋರಿಯಸ್ ರೌಡಿಶೀಟರ್ ಲಕ್ಷ್ಮಣನನ್ನು ಕೊಲೆ ಮಾಡಿರುವ ಘಟನೆ ರಾಜ್‍ಕುಮಾರ್ ರಸ್ತೆಯಲ್ಲಿ ನಡೆದಿದೆ.

 

ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್​ ಆಗಿದ್ದ ಲಕ್ಷ್ಮಣ್​​​ ಬೆಂಗಳೂರಿನ ನಟೋರಿಯಸ್ ರೌಡಿ ರಾಮ್ ನ ಸಹೋದರ. ಈತ ಎರಡು ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ.

ಇನ್ನೋವಾ ಕಾರಲ್ಲಿ ಹೋಗುತ್ತಿದ್ದ ರೌಡಿ ಶೀಟರ್ ಲಕ್ಷ್ಮಣ, ಇಸ್ಕಾನ್ ಸಮೀಪದ ರನೈಜಾನ್ ಅಪಾರ್ಟ್ ಮೆಂಟ್ ಮುಂದೆ ಪಾಸ್ ಆಗುತ್ತಿದ್ದಂತೆ ಮತ್ತೊಂದು ಕಾರಿನಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಬಂದು ಲಕ್ಷ್ಮಣನ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.  ಬಳಿಕ ಮಚ್ಚು, ಲಾಂಗ್‍ಗಳಿಂದ ಲಕ್ಷ್ಮಣನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಈ ವೇಳೆ  ಗಾಯಗೊಂಡಿದ್ದ ಲಕ್ಷ್ಮಣನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಲಕ್ಷ್ಮಣ ಕೊನೆಯುಸಿರೆಳೆದಿದ್ದಾನೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ಮೊದಲು ಲ್ಯಾಂಡ್ ಗ್ರ್ಯಾಬಿಂಗ್ ಕೇಸ್ ನಲ್ಲಿ ಮೃತ ಲಕ್ಷ್ಮಣನನ್ನ ಸಿಸಿಬಿ ಪೊಲೀಸರು ಜೈಲಿಗೆ ಕಳಿಸಿದ್ದರು. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಲಕ್ಷ್ಮಣನ ಮರ್ಡರ್​​​ ಮಾಡಿದ್ದು , ಕುರಿ ಕೃಷ್ಣ ಅಥವಾ ಶ್ರೀಕಂಠ ಗ್ಯಾಂಗ್​​​ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ . ಕುರಿ ಕೃಷ್ಣ ಗ್ಯಾಂಗ್ ​​​, ಶ್ರೀಕಂಠನ ಗ್ಯಾಂಗ್​​ ಜತೆಗೆ ಲಕ್ಷಣ ಕಿರಿಕ್​​ ಮಾಡಿಕೊಂಡಿದ್ದ.  ಹಳೆಯ ಜಿದ್ದಿನ ಮೇಲೆ ಇಂದು ದುಷ್ಕರ್ಮಿಗಳು ಲಕ್ಷ್ಮಣನ್ನು ಕೊಚ್ಚಿ ಕೊಲೆಮಾಡಿದ್ದಾರೆ.